Friday , September 13 2024
Breaking News
Home / Nagaraj M

Nagaraj M

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ 

ನಾಗರಾಜ ಎಸ್ ಮಡಿವಾಳರ್  ಮುದಗಲ್  : ಲಿಂಗಸಗೂರು ತಾಲೂಕಿನ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಿಂಗಸುಗೂರು ಶಿಶು ಅಭಿವೃದ್ಧಿ. ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಕಾರ್ಯಕರ್ತೆಯರ-18 ಮತ್ತು ಸಹಾಯಕಿಯರ-51 ಹುದ್ದೆಗಳನ್ನು ಆನ್‌ಲೈನ್ ವೆಬ್‌ಸೈಟ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು https://karnemakaone.kar.nic.in/abcd/ ವೆಬ್‌ಸೈಟ್‌ನಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು  ದಿನಾಂಕ :30-08-2024 ರಿಂದ 29-09-2024 ರೊಳಗಾಗಿ ಸಲ್ಲಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಲಿಂಗಸುಗೂರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. …

Read More »

ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿಗಳು ಸ್ಥಗಿತ : ಹೂಲಗೇರಿ 

ನಾಗರಾಜ ಎಸ್ ಮಡಿವಾಳರ  ಮುದಗಲ್ : ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣದ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಡಿ ಎಸ್ ಹೂಲಗೇರಿ ಮುದಗಲ್ ಪಟ್ಟಣದಲ್ಲಿ ಹಲವು ಕಾಮಗಾರಿಗಳಿಗೆ ನಾವು ಚಾಲನೆ ನೀಡಿದ್ದೇವೆ ಆದರೆ ಈಗ ಅಧಿಕಾರದಲ್ಲಿರುವ ಜನ ಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿ ಸ್ಥಗಿತಗೊಂಡಿವೆ ಎಂದರು. ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಾತನಾಡಿದ ಅವರು ಪುರಸಭೆ ಅಭಿವೃದ್ಧಿಗಾಗಿ ನಾವು ಶಾಸಕರಿದ್ದಾಗ ನಗರೋತ್ಥಾನ ಯೋಜನೆಯಡಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಆದರೆ ತಾಲೂಕಿನ …

Read More »

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ ಹೊಂದಿದ  ಪಟ್ಟಣದಲ್ಲಿ  ಸಾಕಷ್ಟು  ಸಮಸ್ಯೆಗಳು ಸವಾಲಾಗಿ ಪರಿಣಮಿಸಿದ್ದು, ಸವಾಲುಗಳನ್ನು ಎದುರಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಮಾನವ ಬದುಕಲು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರು ಸಮರ್ಪಕ ನಿರ್ವಹಣೆಯಾಗದಿರುವ ಕಾರಣ ಸ್ಥಳೀಯ ನಿವಾಸಿಗಳು 8-9 ದಿನಗಳಕಾಲ ನೀರು ಶೇಖರಣೆ ಮಾಡಿ  ಕುಡಿಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿ ವರ್ಷಗಳೇ ಕಳೆದು ಹೋಗಿವೆ  …

Read More »

ಮುದಗಲ್  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ    ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್  ಆಯ್ಕೆ 

ನಾಗರಾಜ ಎಸ್ ಮಡಿವಾಳರ  ಮುದಗಲ್ :  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ ಗುತ್ತೇದಾರ ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ  ಶಾಂಶಲಾಂ ಹೇಳಿದರು. ಸರಕಾರ ಕೆಲ ದಿನಗಳ ಹಿಂದೆ ಹೊರಡಿಸಿದ್ದ ಆದೇಶದಂತೆ ಸಾಮಾನ್ಯ ಮಹಿಳೆ  ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ  ಕಾಂಗ್ರೆಸ್ ಸದಸ್ಯರಲ್ಲಿ   ತೀವ್ರ ಪೈಪೋಟಿ ಸೃಷ್ಟಿ ಮಾಡಿತ್ತು ಕಾಂಗ್ರೆಸ್ ಮಹಿಳಾ ಸದಸ್ಯರಾದ  15 ನೇ  ವಾರ್ಡ್ ಸದಸ್ಯೆ ಮಹಾದೇವಮ್ಮ ಗುತ್ತೇದಾರ ರನ್ನ ಅಧ್ಯಕ್ಷೆಯಾಗಿ 14ನೇ ವಾರ್ಡ್ …

Read More »

ಮೂಡ ಹಗರಣವೇ ಅಲ್ಲ, ಸಿದ್ದರಾಮಯ್ಯರ  ಪಾತ್ರ ಇಲ್ಲ : ಶರಣಬಸಪ್ಪ ದರ್ಶನಾಪುರ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ :    ಮೂಡ ಒಂದು ಹಗರಣವೇ ಅಲ್ಲ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ  ಶರಣಬಸಪ್ಪ ದರ್ಶನಾಪುರ ಹೇಳಿದರು. ಮಂಗಳವಾರ ಸಮೀಪದ ಸಜ್ಜಲಗುಡ್ಡದ ಶರಣಮ್ಮ ತಾಯಿ ಶ್ರೀ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು ರಾಜ್ಯಪಾಲರು ಬಿಜೆಪಿಯವರ ಕೈಗೊಂಬೆಯಾಗಿದ್ದಾರೆ ಸುಭದ್ರ ಕಾಂಗ್ರೆಸ್ ಸರಕಾರ ಜನರ ಹೇಳಿಗೆಗಾಗಿ ನಡೆಯುತ್ತಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿರುವುದರಿಂದ ಈ ಮೂಡ ಹಗರಣ ಎಂದು …

Read More »

ಮುದಗಲ್ : ಹಂದಿಗಳನ್ನ ಬಿಡದ ಕಳ್ಳರು ; ಪೊಲೀಸರಿಗೆ ದೂರು 

ನಾಗರಾಜ್ ಎಸ್ ಮಡಿವಾಳರ  ಮುದಗಲ್ : ಹಂದಿಗಳ ಕಳವು ನಡೆದಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದಲ್ಲಿ ಸುಮಾರು ತಿಂಗಳಿಂದ ರಾತ್ರೋ ರಾತ್ರಿ ಕಳ್ಳರು ಬಂದು ಸಾಕು ಹಂದಿಗಳ ಕಳವು ಮಾಡುತ್ತಿದ್ದಾರೆ ಇಲ್ಲಿಯವರೆಗೆ ಸುಮಾರು 120 ರಿಂದ 150 ಹಂದಿಗಳು ಕಳವುವಾಗಿದ್ದು ಒಂದು ಹಂದಿಯ ಬೆಲೆ 800ರಿಂದ 1000 ರೂಪಾಯಿವರೆಗೆ ಇರುತ್ತದೆ. ಇದರಿಂದ ನಮಗೆ ತುಂಬಾ ನಷ್ಟವಾಗುತ್ತಿದೆ ಹಂದಿ ಕಳ್ಳರ ಪತ್ತೆಮಾಡಿ ನಮಗೆ ನ್ಯಾಯ ಒದಗಿಸಬೇಕೆಂದು ಕೊರವ …

Read More »

ಸಹೋದರಿ ಸಾವಿನ ಸುದ್ದಿ ಕೇಳಿ ಸಹೋದರ ಹೃದಯಘಾತವಾಗಿ  ಸಾವು 

ನಾಗರಾಜ್ ಎಸ್ ಮಡಿವಾಳರ  ರಾಯಚೂರು :  ಸಹೋದರಿ ಸಾವಿನ ಸುದ್ದಿ ಕೇಳಿ ಸಹೋದರ ಹೃದಯಘಾತವಾಗಿ ಆತನು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿರವಾರದಲ್ಲಿ ನಡೆದಿದೆ.  ಕಳೆದ ಗುರುವಾರ ದೇವದುರ್ಗ ತಾಲೂಕಿನ ಶಾವಂತಗಲ್ ಗ್ರಾಮದ ಅಂಬಿಕಾ ಎನ್ನುವ ಯುವತಿಯನ್ನ ಅನಾರೋಗ್ಯದ  ಕಾರಣ ಸಿರವಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಶುಕ್ರವಾರ ಅಂಬಿಕಾ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದಾಳೆ ತಂಗಿಯ ಸಾವಿನ ಸುದ್ದಿ ಕೇಳುತ್ತಲೇ ಅಣ್ಣ ವೆಂಕಟೇಶನಿಗೆ ಹೃದಯಘಾತವಾಗಿ ಸಾವನ್ನಪ್ಪಿದ್ದಾನೆ ಈ ಘಟನೆ ಎಲ್ಲರ …

Read More »

ಮೇ 29 ರಿಂದ ಅಂಕಲಿಮಠದ ಜಾತ್ರಾ ಮಹೋತ್ಸವ 

ನಾಗರಾಜ ಎಸ್ ಮಡಿವಾಳರ್  ಮುದಗಲ್ :  ತ್ರಿವಿಧ ದಾಸೋಹ ಮೂರ್ತಿ ಪರಮ ಪೂಜ್ಯ ಶ್ರೀ ವೀರಭದ್ರ ಮಹಾಸ್ವಾಮಿಗಳ ಅಪ್ಪಣೆ ಮೇರೆಗೆ ಪಟ್ಟಣದ ಸಮೀಪದ ಸುಕ್ಷೇತ್ರ ಅಂಕಲಿಮಠದಲ್ಲಿ  ಮೇ 29.30.31 ಮೂರು ದಿನಗಳ ಕಾಲ ಶ್ರೀ ನಿರುಪಾಧಿಶ್ವರರ ಜಾತ್ರಾ ಮಹೋತ್ಸವ ನಡೆಲಿದೆ ಎಂದು ಅಂಕಲಿಮಠದ ಪರಮ ಪೂಜ್ಯ ಶ್ರೀ ಬಸವರಾಜ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 29 ಬುಧವಾರ ದಂದು ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾ ರುದ್ರಭಿಷೇಕ …

Read More »

ಶೀಲಾ ಜಿಲ್ಲೆಗೆ ಮಾದರಿ ಮುಖ್ಯೋಪಾಧ್ಯಾಯಿನಿ : ಕನಕಪ್ಪ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಸಮೀಪದ ಬನ್ನಿಗೋಳ ಗ್ರಾಮದ ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಶೀಲಾ ಬಿಜಿ ರವರು ಜಿಲ್ಲೆಗೆ ಮಾದರಿ ಮುಖ್ಯಶಿಕ್ಷಕಿಯಾಗಿದ್ದಾರೆ ಎಂದು ಶಿಕ್ಷಕ ಕನಕಪ್ಪ ಹೇಳಿದರು. ಮಂಗಳವಾರ ಬನ್ನಿಗೋಳ ಪ್ರೌಢ ಶಾಲೆಯಲ್ಲಿ ನಡೆದ ಗುರುವಂದನಾ ಹಾಗೂ ವರ್ಗಾವಣೆಗೊಂಡ ಶಿಕ್ಷಕಿ ಶೀಲಾ ರವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶೀಲಾ ಮೇಡಂ ರವರು ನೂರಾರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬನ್ನಿಗೋಳ ಗ್ರಾಮದಲ್ಲಿ ಭದ್ರ ಬುನಾದಿಯಾಗಿ ನೂತನ ಶಾಲಾ …

Read More »

ಮುದಗಲ್ : ಮಲ್ಲಿಕಾರ್ಜುನ ಸ್ಟುಡಿಯೋ ಆಪ್ ಬಿಡುಗಡೆ

ಮುದಗಲ್ : ಪಟ್ಟಣದ ಶ್ರೀ ಮಲ್ಲಿಕಾರ್ಜುನ ಫೋಟೋ ಸ್ಟುಡಿಯೋ ಆಪ್ ಬಿಡುಗಡೆ ಮಾಡಲಾಯಿತು. ರವಿವಾರ ಪಟ್ಟಣದ ಭಾರತ್ ಕಲ್ಯಾಣ ಮಂಟಪದಲ್ಲಿ ನಡೆದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಮಹಾಂತ ಸ್ವಾಮೀಜಿ ರವರು ಮಲ್ಲಿಕಾರ್ಜುನ ಸ್ಟುಡಿಯೋ ಹಾಗೂ ಭಾರತ್ ಕಲ್ಯಾಣ ಮಂಟಪ ಇವರ ಸಹಯೋಗದಲ್ಲಿ ರೂಪಗೊಂಡ ಶ್ರೀ ಮಲ್ಲಿಕಾರ್ಜುನ ಸ್ಟುಡಿಯೋ ಆಪ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಶ್ರೀಗಳು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂತಹ ಹೊಸತನದ ಬೆಳವಣಿಗೆ ಮಾಡುವಲ್ಲಿ ಮುದಗಲ್ಲಿನ ಮಲ್ಲಿಕಾರ್ಜುನ …

Read More »
error: Content is protected !!