Saturday , October 12 2024
Breaking News
Home / Breaking News / ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿಗಳು ಸ್ಥಗಿತ : ಹೂಲಗೇರಿ 

ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿಗಳು ಸ್ಥಗಿತ : ಹೂಲಗೇರಿ 

ನಾಗರಾಜ ಎಸ್ ಮಡಿವಾಳರ 
ಮುದಗಲ್ : ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣದ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಡಿ ಎಸ್ ಹೂಲಗೇರಿ ಮುದಗಲ್ ಪಟ್ಟಣದಲ್ಲಿ ಹಲವು ಕಾಮಗಾರಿಗಳಿಗೆ ನಾವು ಚಾಲನೆ ನೀಡಿದ್ದೇವೆ ಆದರೆ ಈಗ ಅಧಿಕಾರದಲ್ಲಿರುವ ಜನ ಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿ ಸ್ಥಗಿತಗೊಂಡಿವೆ ಎಂದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಾತನಾಡಿದ ಅವರು ಪುರಸಭೆ ಅಭಿವೃದ್ಧಿಗಾಗಿ ನಾವು ಶಾಸಕರಿದ್ದಾಗ
ನಗರೋತ್ಥಾನ ಯೋಜನೆಯಡಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಆದರೆ ತಾಲೂಕಿನ ಚುನಾಯಿತ ಜನಪ್ರತಿನಿಧಿ ಅವುಗಳ ಬಗ್ಗೆ ಕಾಳಜಿವಹಿಸಿ ಅಭಿವೃದ್ಧಿಗಳ ಕಾರ್ಯ ಮಾಡಬೇಕಾಗಿರುವುದು ಅವರ ಕರ್ತವ್ಯ ನಮ್ಮ ಪಕ್ಷದ ಅಧ್ಯಕ್ಷ, ಉಪಾಧ್ಯಕ್ಷರುಗಳಿಗೆ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸಲು ಒತ್ತುನೀಡಲು ಹೇಳಿದ್ದೇವೆ ಎಂದರು ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಮಾತನಾಡಿ  ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಶ್ರಮವಹಿಸುತ್ತೇನೆ ಎಂದರು ನಂತರ ಮಾತನಾಡಿದ  ಉಪಾಧ್ಯಕ್ಷ  ಅಜ್ಮಿರ್ ಬೆಳ್ಳಿಕಟ್ ಪಟ್ಟಣದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಾವು  ಕಾರ್ಯನಿರ್ವಹಿಸುತ್ತಿವೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಧಿಕಾರಿ ನಬಿ ಸಾಬ್ ಕಂದಗಲ್, ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಗೌಡರ್,ಕಾಂಗ್ರೆಸ್  ತಮ್ಮಣ್ಣ ಗುತ್ತೇದಾರ,ಮಹಾಂತೇಶ್ ಪಾಟೀಲ್,ರಘುವೀರ್ ಚಲುವಾದಿ,ಪುರಸಭೆ ಸದಸ್ಯರು,
ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.

About Nagaraj M

Check Also

ಮುದಗಲ್  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ    ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್  ಆಯ್ಕೆ 

ನಾಗರಾಜ ಎಸ್ ಮಡಿವಾಳರ  ಮುದಗಲ್ :  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ ಗುತ್ತೇದಾರ ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ …

error: Content is protected !!