Saturday , October 12 2024
Breaking News
Home / Breaking News / ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ 
ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ ಹೊಂದಿದ  ಪಟ್ಟಣದಲ್ಲಿ  ಸಾಕಷ್ಟು  ಸಮಸ್ಯೆಗಳು ಸವಾಲಾಗಿ ಪರಿಣಮಿಸಿದ್ದು, ಸವಾಲುಗಳನ್ನು ಎದುರಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕಿದೆ.
ಮಾನವ ಬದುಕಲು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರು ಸಮರ್ಪಕ ನಿರ್ವಹಣೆಯಾಗದಿರುವ ಕಾರಣ ಸ್ಥಳೀಯ ನಿವಾಸಿಗಳು 8-9 ದಿನಗಳಕಾಲ ನೀರು ಶೇಖರಣೆ ಮಾಡಿ  ಕುಡಿಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿ ವರ್ಷಗಳೇ ಕಳೆದು ಹೋಗಿವೆ  ಡಿ ಎಸ್ ಹೂಲಗೇರಿ ಶಾಸಕರಾಗಿದ್ದಾಗ ನಗರೋತ್ಥಾನ  ಅಡಿಯಲ್ಲಿ ಸರ್ಕಾರದಿಂದ ಮಂಜೂರಾಗಿದ್ದ ಸುಮಾರು 9  ಕೋಟಿ ರೂ. ಗಳ ಅನುದಾನದಲ್ಲಿ  ಹಲವು ವಾರ್ಡ್ ಗಳಲ್ಲಿ ಕಾಮಗಾರಿ  ಭೂಮಿಪೂಜೆ ನೆರವೇರಿಸಿದ್ದರು  ಆದರೆ ಇನ್ನು ವಾರ್ಡ್ ಗಳಲ್ಲಿ  ಕಾಮಗಾರಿ ಆರಂಭವೇ ಆಗಿಲ್ಲ ಸೇರಿದಂತೆ ಪುರಸಭೆ ಕಾರ್ಯಾಲಯದ ಅಧಿಕಾರಿಗಳ ಕಾರ್ಯವೈಖರಿಯು ಜನರಿಗೆ ಬೇಸರದ ತಂದಿದ್ದು
ಸಾರ್ವಜನಿಕರು ದಿನನಿತ್ಯ ಪುರಸಭೆಗೆ  ಹಿಡಿಶಾಪ ಹಾಕುತ್ತಿದ್ದಾರೆ ಹೀಗೆ ಪಟ್ಟಣದಲ್ಲಿ ಹತ್ತಾರು ಸಮಸ್ಯೆಗಳಿದ್ದು  ಹಲವು ಬಾರಿ ಸಾರ್ವಜನಿಕರು, ಸಂಘಟನೆಗಳು ಪುರಸಭೆಗೆ ಮನವಿ ಮಾಡಿದರು ಕೂಡ ಪುರಸಭೆ ಕುಂಭಕರ್ಣ ನಿದ್ದೆಯಿಂದ ಎದ್ದಿಲ್ಲ ಇನ್ನಾದರೂ ನೂತನ ಅಧ್ಯಕ್ಷರು, ಉಪಾಧ್ಯಕ್ಷರ ನೇತೃತ್ವದ ಆಡಳಿತ  ಪಟ್ಟಣದಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ  ಭರವಸೆಯಲ್ಲಿ ಜನರಿದ್ದಾರೆ.

About Nagaraj M

Check Also

ಮುದಗಲ್  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ    ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್  ಆಯ್ಕೆ 

ನಾಗರಾಜ ಎಸ್ ಮಡಿವಾಳರ  ಮುದಗಲ್ :  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ ಗುತ್ತೇದಾರ ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ …

error: Content is protected !!