Saturday , July 27 2024
Home / Breaking News / ಮೇ 29 ರಿಂದ ಅಂಕಲಿಮಠದ ಜಾತ್ರಾ ಮಹೋತ್ಸವ 

ಮೇ 29 ರಿಂದ ಅಂಕಲಿಮಠದ ಜಾತ್ರಾ ಮಹೋತ್ಸವ 

ನಾಗರಾಜ ಎಸ್ ಮಡಿವಾಳರ್ 
ಮುದಗಲ್ :  ತ್ರಿವಿಧ ದಾಸೋಹ ಮೂರ್ತಿ ಪರಮ ಪೂಜ್ಯ ಶ್ರೀ ವೀರಭದ್ರ ಮಹಾಸ್ವಾಮಿಗಳ ಅಪ್ಪಣೆ ಮೇರೆಗೆ ಪಟ್ಟಣದ ಸಮೀಪದ ಸುಕ್ಷೇತ್ರ ಅಂಕಲಿಮಠದಲ್ಲಿ  ಮೇ 29.30.31 ಮೂರು ದಿನಗಳ ಕಾಲ ಶ್ರೀ ನಿರುಪಾಧಿಶ್ವರರ ಜಾತ್ರಾ ಮಹೋತ್ಸವ ನಡೆಲಿದೆ ಎಂದು ಅಂಕಲಿಮಠದ ಪರಮ ಪೂಜ್ಯ ಶ್ರೀ ಬಸವರಾಜ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 29 ಬುಧವಾರ ದಂದು ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾ ರುದ್ರಭಿಷೇಕ ನಂತರ  ಅಯ್ಯಾಚಾರ ಕಾರ್ಯಕ್ರಮ  ಮತ್ತು ಮುತ್ತೈದೆಯರಿಗೆ  ಉಡಿ ತುಂಬುವ ಕಾರ್ಯಕ್ರಮ.ದಿನಾಂಕ : 30 ಗುರುವಾರ  ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶಿವಭಜನೆ ಪ್ರಾರಂಭ ನಂತರ ಉಚಿತ ಆರೋಗ್ಯ ತಪಾಸಣೆ ಚಿಕಿತ್ಸೆ ಶಿಬಿರ,ರಕ್ತದಾನ ಶಿಬಿರ ಸಂಜೆ 4 ಘಂಟೆಗೆ ಶಿರಹಟ್ಟಿ ಶ್ರೀ ಜಗದ್ಗುರು  ಭಾವೈಕ್ಯತೆ ಮಹಾ ಸಂಸ್ಥಾನ ಪೀಠ ಫಕೀರ ಸಿದ್ದರಾಮ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಪೂಜ್ಯರ ಗುರುವಂದನಾ  ಮತ್ತು ಸಾಂಸ್ಕೃತಿಕ  ಕಾರ್ಯಕ್ರಮಗಳು ಜರುಗಲಿವೆ.
31 ಶುಕ್ರವಾರ ದಂದು ಬ್ರಾಹ್ಮೀ ಮುಹೂರ್ತದಲ್ಲಿ ಶಿವಭಜನೆ ಸಮಾಪ್ತಿಯಾಗುವುದು ನಂತರ ಸಕಲ ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಉಚ್ಚಯ ಜರಗುವದು.
ನಂತರ ಮಹಾಪ್ರಸಾದ ಪೂಜೆ 11 ಘಂಟೆಗೆ ಮಾತೋಶ್ರೀ ಪಾರ್ವತೆಮ್ಮನವರ ನೂತನ ಮಂಗಲ ಭವನ ಲೋಕಾರ್ಪಣೆ ಧರ್ಮಸಭೆ ಮತ್ತು ಸಾಮೂಹಿಕ ವಿವಾಹ ಸಂಜೆ  ಸಕಲ ವಾದ್ಯ ವೈಭವಗಳೊಂದಿಗೆ ಮಹಾರಥೋತ್ಸವ ನಂತರ ಹಾಸ್ಯ ಸಂಜೆ ಕಾರ್ಯಕ್ರಮ ನಡೆಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ನಿರುಪಾಧಿಶ್ವರ ಕೃಪೆಗೆ ಪಾತ್ರರಾಗಬೇಕೆಂದು ಕರೆ ನೀಡಿದರು.

About Nagaraj M

Check Also

ಮುದಗಲ್ : ಹಂದಿಗಳನ್ನ ಬಿಡದ ಕಳ್ಳರು ; ಪೊಲೀಸರಿಗೆ ದೂರು 

ನಾಗರಾಜ್ ಎಸ್ ಮಡಿವಾಳರ  ಮುದಗಲ್ : ಹಂದಿಗಳ ಕಳವು ನಡೆದಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದಲ್ಲಿ …

error: Content is protected !!