ಮುದಗಲ್ : ಹಂದಿಗಳನ್ನ ಬಿಡದ ಕಳ್ಳರು ; ಪೊಲೀಸರಿಗೆ ದೂರು 

Nagaraj M
1 Min Read

ನಾಗರಾಜ್ ಎಸ್ ಮಡಿವಾಳರ 

ಮುದಗಲ್ : ಹಂದಿಗಳ ಕಳವು ನಡೆದಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಟ್ಟಣದಲ್ಲಿ ಸುಮಾರು ತಿಂಗಳಿಂದ ರಾತ್ರೋ ರಾತ್ರಿ ಕಳ್ಳರು ಬಂದು ಸಾಕು ಹಂದಿಗಳ ಕಳವು ಮಾಡುತ್ತಿದ್ದಾರೆ ಇಲ್ಲಿಯವರೆಗೆ ಸುಮಾರು 120 ರಿಂದ 150 ಹಂದಿಗಳು ಕಳವುವಾಗಿದ್ದು ಒಂದು ಹಂದಿಯ ಬೆಲೆ 800ರಿಂದ 1000 ರೂಪಾಯಿವರೆಗೆ ಇರುತ್ತದೆ. ಇದರಿಂದ ನಮಗೆ ತುಂಬಾ ನಷ್ಟವಾಗುತ್ತಿದೆ ಹಂದಿ ಕಳ್ಳರ ಪತ್ತೆಮಾಡಿ ನಮಗೆ ನ್ಯಾಯ ಒದಗಿಸಬೇಕೆಂದು ಕೊರವ ಸಮಾಜದಿಂದ ಮುದಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್, ನಾಗರಾಜ್, ರಾಮಣ್ಣ, ಸುರೇಶ, ದ್ಯಾಮಣ್ಣ, ಗದ್ದೆಪ್ಪ, ನಾಗರಾಜ್, ಹನುಮೇಶ್ ಇದ್ದರು.
Share this Article
error: Content is protected !!