Saturday , October 12 2024
Breaking News
Home / Breaking News / ಶೀಲಾ ಜಿಲ್ಲೆಗೆ ಮಾದರಿ ಮುಖ್ಯೋಪಾಧ್ಯಾಯಿನಿ : ಕನಕಪ್ಪ

ಶೀಲಾ ಜಿಲ್ಲೆಗೆ ಮಾದರಿ ಮುಖ್ಯೋಪಾಧ್ಯಾಯಿನಿ : ಕನಕಪ್ಪ

ನಾಗರಾಜ ಎಸ್ ಮಡಿವಾಳರ 

ಮುದಗಲ್ : ಸಮೀಪದ ಬನ್ನಿಗೋಳ ಗ್ರಾಮದ ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಶೀಲಾ ಬಿಜಿ ರವರು ಜಿಲ್ಲೆಗೆ ಮಾದರಿ ಮುಖ್ಯಶಿಕ್ಷಕಿಯಾಗಿದ್ದಾರೆ ಎಂದು ಶಿಕ್ಷಕ ಕನಕಪ್ಪ ಹೇಳಿದರು.

ಮಂಗಳವಾರ ಬನ್ನಿಗೋಳ ಪ್ರೌಢ ಶಾಲೆಯಲ್ಲಿ ನಡೆದ ಗುರುವಂದನಾ ಹಾಗೂ ವರ್ಗಾವಣೆಗೊಂಡ ಶಿಕ್ಷಕಿ ಶೀಲಾ ರವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶೀಲಾ ಮೇಡಂ ರವರು ನೂರಾರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬನ್ನಿಗೋಳ ಗ್ರಾಮದಲ್ಲಿ ಭದ್ರ ಬುನಾದಿಯಾಗಿ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಶ್ರಮವಹಿಸಿ ಹಳ್ಳಿಗಾಡಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಕನಸು ಹೊತ್ತು ಕಳೆದ ೧೧ ವರ್ಷಗಳ ಕಾಲ ಲಿಂಗಸಗೂರು ತಾಲೂಕಿನಲ್ಲೇ ಸೇವೆ ಸಲ್ಲಿಸಿದ್ದಾರೆ ಇಂತಹ ಕನಸುಗಾತಿ ಶಿಕ್ಷಕಿಯನ್ನ ಬಿಟ್ಟು ಕೊಡಲು ಮನಸಿಲ್ಲ ಆದರೆ ಸರಕಾರ ಅವರಿಗೆ ವರ್ಗಾವಣೆ ನೀಡಿ ಆದೇಶ ಹೊರಡಿಸಿದೆ ಅನಿವಾರ್ಯವಾಗಿ ಅವರನ್ನ ನಾವು ಬಿಟ್ಟು ಕೊಡಬೇಕಾಗಿದೆ ಎಂದರು. ನಂತರ ಹಳೆ ವಿದ್ಯಾರ್ಥಿಗಳು ಶೀಲಾ ರವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಅಶೋಕ್ ಗೌಡ, ಮಲ್ಲಪ್ಪ, ನೀಲಣ್ಣ ಅಚ್ಚುನೂರು, ಶಿಕ್ಷಕ ಹುಸೇನ್ ಸಾಬ್
ಸೇರಿದಂತೆ ಹಳೆ ವಿದ್ಯಾರ್ಥಿಗಳು ಶಾಲಾ ಸಹ ಶಿಕ್ಷಕರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!