ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ :  ಪಟ್ಟಣದ ಖಾಜಾಸಾಬ ಹಸನ್ ಸಾಬ  ಮೂಲಿಮನಿ ಎಂಬುವರ  ಜಮೀನಿನಲ್ಲಿ ಜಾನುವಾರುಗಳಿಗೆ  ಶೇಖರಿಸಿಟ್ಟಿದ್ದ ಮೇವಿನ ಬಣವಿಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವು ಬಂಕಿಗೆ ಆಹುತಿಯಾಗಿದೆ.
ಜಾನುವಾರುಗಳಿಗೆಂದು ಒಂದು ವರ್ಷದಿಂದ ಕೂಡಿ ಹಾಕಿದ್ದ ಮೂರು ಮೇವಿನ ಬಣವಿಗಳಿಗೆ ಆಕಸ್ಮಿಕವಾಗಿ ಬೆಂಕಿ  ತಗುಲಿ ಆಪಾರ ಪ್ರಮಾಣದ ಮೇವು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯಿಂದ  ರೈತ    ಖಾಜಾಸಾಬ ಹಸನ್ ಸಾಬ  ಮೂಲಿಮನಿ ಕಂಗಾಲಾಗಿದ್ದಾರೆ.
    
    
    
	
            