ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:-ಸಮೀಪದ ಜುಮಲಾಪುರ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಪೊಲೀಸ್ ಪಾಟೀಲ್ ಎಂಬ ವ್ಯಕ್ತಿಯು ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಜರುಗಿದೆ.
ಶಿಕ್ಷಕನಿಗೆ ಆನ್ಲೈನ ಗೇಮಿನ ಹವ್ಯಾಸವಿತ್ತೆಂದು ತಿಳಿದುಬಂದಿದೆ ಮುದ್ದುಲಗುಂದಿ ಗ್ರಾಮದ ಬಡತನ ಕುಟುಂಬದಿಂದ ಬಂದಿದ್ದ ಶಿಕ್ಷಕ ಬಸನಗೌಡ ಪಾಟೀಲ್ ಒಳ್ಳೆ ಶಿಕ್ಷಣ ಪಡೆದು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಆನ್ಲೈನ್ ಗೆಮಿನ ಹುಚ್ಚಾಟಕ್ಕೆ. ಬಲಿಯಾಗಿದ್ದು ವಿಪರ್ಯಾಸವೇ ಸರಿ ಶಿಕ್ಷಕ ವೃತ್ತಿಗಾಗಿ ಸಾವಿರಾರು ಜನ ನಿರುದ್ಯೋಗಿ ವಿದ್ಯಾವಂತರು ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಇಂಥ ಸಂದರ್ಭದಲ್ಲಿ ಉದ್ಯೋಗ ದೊರೆತರೂ ಅದನ್ನು ಉಳಿಸಿಕೊಳ್ಳದೆ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವುದು ಯಾವ ನ್ಯಾಯಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಆನ್ಲೈನ್ ಗೇಮ್ ನಿಂದ ಸಾಲ ಮಾಡಿಕೊಂಡಿದ್ದು ಇದಕ್ಕಾಗಿ ಮನನೊಂದು ಧರ್ಮಸ್ಥಳದ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ ಈ ಕುರಿತು ಬೆಳತಂಗಡಿ ತಾಲೂಕಿನ ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.