ತಾವರಗೇರಾ:- ಸಂಭ್ರಮದ ಮೊಹರಂ ಆಚರಣೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ತ್ಯಾಗ ಬಲಿದಾನಗಳ ಸ್ಮರಣೆ ಮಾಡುವ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ಸರ್ವ ಧರ್ಮದವರು ವಿಜೃಂಭಣೆಯಿಂದ ಆಚರಿಸಿದರು ಅರುಣ್ ಹಬ್ಬದ ಕೊನೆಯ ದಿನವಾದ ಭಾನುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಾಯಿ ದೇವರುಗಳ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು ಸ್ಥಳೀಯ ಖಾಜಾ ಬಂಧೇನವಾಜ ಹಾಗೂ ಶಾಮೀದಲಿ ದರ್ಗಾದ ಎರಡು ಮಸೀದಿಗಳ ದೇವರು ಪಟ್ಟಣ ಪಂಚಾಯತಿ ಮುಂದುಗಡೆ ಇರುವ ಬಜಾರದಲ್ಲಿ ಪರಸ್ಪರ ಭೇಟಿ ನೀಡುವ ಮೂಲಕ ಹಬ್ಬ ಆಚರಿಸಲಾಯಿತು ಪಟ್ಟಣದ ಸಾವಿರಾರು ಜನರು ಈ ಸಂದರ್ಭದಲ್ಲಿ ಸೇರಿ ದೇವರ ದರ್ಶನ ಪಡೆದರು ಸಂಜೆ ವೇಳೆಗೆ ಮತ್ತೊಮ್ಮೆ ಭೇಟಿ ನೀಡಿ ನಂತರ ದಫನ್ ಮೂಲಕ ಹಬ್ಬಕ್ಕೆ ವಿದಾಯ ಹೇಳಲಾಯಿತು ಹಬ್ಬವು ಶಾಂತರೀತಿಯಿಂದ ನಡೆದು ಎಲ್ಲಾ ಧರ್ಮದವರು ಪಾಲ್ಗೊಂಡು ಮತ್ತೊಮ್ಮೆ ಭಾವೈಕ್ಯತೆಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮೊಹರಂ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎತ್ತುಗಳಿಂದ ಮರದ ದಿಬ್ಬೆಯನ್ನು (ಕೊರಡು) ರೈತರು ಬೆಳೆಸಿ ಸಂಭ್ರಮಿಸಿದರು ಈ ಬಾರಿ ಒಂದುವರೆ ಟನ್ ತೂಕದ ಕೊರಡನ್ನು ಪಟ್ಟಣದ ರೈತ ಚಾಂದ್ ಪಾಷಾಮುಲ್ಲಾ ಅವರ ಒಂದು ಎತ್ತು ಎಳೆಯುವ ಮೂಲಕ ಸಾರ್ವಜನಿಕರ ಗಮನ ಸೆಳೆಯಿತು .

Share this Article
error: Content is protected !!