

ಲಿಂಗಸಗೂರು : ತಾಲೂಕಿನ ಕಾಳಾಪೂರ ಗ್ರಾಮದ ಹೊರವಲಯದಲ್ಲಿರುವ ಎನ್‌ಆರ್‌ಬಿಸಿ ಮುಖ್ಯ ಕಾಲುವೆಯಲ್ಲಿ ಬಟ್ಟೆ ತೊಳೆಯಲು ತಾಯಿ ಜೊತೆ ತೆರಳಿದ್ದ ಬಸವರಾಜ ತಂದೆ ಹುಸೇನಪ್ಪ ಎನ್ನುವ ಬಾಲಕ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದೆ. ಕಾಳಾಪೂರ ಗ್ರಾಮ ಹೊರವಲಯದಲ್ಲಿ ಎನ್‌ಆರ್‌ಬಿಸಿ (ನಾರಾಯಣಪುರ ಬಲದಂಡೆ ಕಾಲುವೆ) ಮುಖ್ಯ ಕಾಲುವೆಯಲ್ಲಿ ಈ ಘಟನೆ ನಡೆದಿದೆ.ಬಾಲಕನ ಹುಡುಕಾಟಕ್ಕೆ ಅಗ್ನಿಶಾಮಕ ಸಿಬ್ಬಂದಿಗಳಿಂದ ಶೋಧ ಕಾರ್ಯ ಮುಂದುವರೆಸಿದ್ದಾರೆ.