ತಾವರಗೇರಾ ಪೊಲೀಸರ ಭರ್ಜರಿ ಬೇಟೆ : ಆರೋಪಿಗಳ  ವಶ 

Nagaraj M
1 Min Read
ಎನ್ ಶಾಮೀದ್  ತಾವರಗೇರಾ
ತಾವರಗೇರಾ : ಪಟ್ಟಣದಲ್ಲಿ   ಕಳೆದ ಒಂದು ತಿಂಗಳ ಅವಧಿಯಲ್ಲಿ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಏಳು ಮೋಟರ್ ಬೈಕ್ ಗಳು, ಹನ್ನೇರಡು ಮೊಬೈಲ್
ಗಳು ಕಳ್ಳತನ ವಾಗಿದ್ದವು. ೪೮ ತಾಸುಗಳ
ಒಳಗಾಗಿ ಆರೋಪಿಗಳನ್ನು, ಕಳ್ಳತನವಾದ
ಮಾಲನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು
ಎರಡು ಪ್ರಕರಣಗಳು ದಾಖಲಾಗಿದ್ದು.
ಕಳ್ಳರ ಸುಳಿವು ಪತ್ತೆ ಮಾಡಿದ ತಾವರಗೇರಾ
ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ ಎಸ್ ಟಿ, ಗಂಗಾವತಿ
ಡಿ ವಾಯ್ ಎಸ್ ಪಿ  ಆರ್ ಎಸ್ ಉಜ್ಜನಕೊಪ್ಪ, ಸಿಪಿಐ ನಿಂಗಪ್ಪ
ಎನ್ ಆರ್ ಇವರುಗಳ ಮಾರ್ಗದರ್ಶನದಲ್ಲಿ
ತಾವರಗೇರಾ ಪಿಎಸ್‌ಐ ಗೀತಾಂಜಲಿ ಶಿಂಧೆ, ಎಎಸ್‌ಐ ಅತೀಕ್,
ಪೇದೆಗಳಾದ ಬಸವರಾಜ ಇಂಗಳದಾಳ, ಆನಂದ್,
ಹನುಮಗೌಡ, ವರೇಶ, ಶಿವಪುತ್ರಪ್ಪ,
ಶರಣಪ್ಪ, ರಾಜಾಭಕ್ಷಿ ಸೇರಿ ಎರಡು ದಿನಗಳ
ಅವಧಿಯಲ್ಲಿ ಕಳ್ಳತನವಾದ ಏಳು ಬೈಕ್
ಗಳನ್ನು ಮತ್ತು ಆರೋಪಿಯನ್ನು ವಶಕ್ಕೆ
ಪಡೆದಿದ್ದು, ಹಾಗು ಹನ್ನೇರಡು ಮೊಬೈಲ್
ಗಳನ್ನು ಹಾಗು ಆರೋಪಿಯನ್ನು ವಶಕ್ಕೆ
ಪಡೆದಿದ್ದಾರೆ. ಗಂಗಾವತಿ ಡಿವಾಯಎಸ್ಪಿ ಆರ್ ಎಸ್ ಉಜ್ಜನಕೊಪ್ಪ, ಸಿಪಿಐ
ನಿಂಗಪ್ಪ ಗುರುವಾರ ಸ್ಥಳೀಯ ಠಾಣೆಗೆ
ಭೆಟ್ಟಿ ನೀಡಿದ್ದು, ಪೊಲೀಸರ ಕೆಲಸಕ್ಕೆ
ಸಂತೋಷ ವ್ಯಕ್ತಪಡಿಸಿದರು.
Share this Article
error: Content is protected !!