ಲಿಂಗಸಗೂರು : 14 ತಿಂಗಳ ಮಗುವಿನ ನೇತ್ರದಾನ

Nagaraj M
0 Min Read
ನಾಗರಾಜ ಎಸ್ ಮಡಿವಾಳರ 
ಲಿಂಗಸಗೂರು : ಪಟ್ಟಣದ ಸಮೀಪದ ಗೆಜ್ಜೆಲಘಟ್ಟ ಗ್ರಾಮದ 14 ತಿಂಗಳ ಮಗುವಿನ ನೇತ್ರದಾನ ಮಾಡುವ
ಮೂಲಕ ಮಗುವಿನ ಪಾಲಕರು ಮಾನವೀಯತೆ ಮೆರದಿದ್ದಾರೆ.
ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮರೇಗೌಡ ಕಾಮರೆಡ್ಡಿ ದಂಪತಿಗಳ  ಮೂರನೇ ಪುತ್ರ ಬಸವಪ್ರಭು ಎಂಬುವ 14 ತಿಂಗಳ ಮಗು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಬೆಂಗಳೂರು ಸೇರಿ ಬೇರೆ ಬೇರೆ ಕಡೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದ್ದು ಮಗನ ಸಾವಿನ ನೋವಲ್ಲೂ ದಂಪತಿಗಳು ಮಗುವಿನ  ಎರಡೂ ಕಣ್ಣುಗಳನ್ನು ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿಗೆ ದಾನ ಮಾಡಿ ಮಗನ ಸಾವಿನಲ್ಲೂ ಸಾರ್ಥಕತೆ ಮೆರದಿದ್ದಾರೆ.
Share this Article
error: Content is protected !!