ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯ

Nagaraj M
0 Min Read
ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ನಿರಂತರ ಸುರಿಯುತ್ತಿರುವ ಬಾರಿ  ಮಳೆಗೆ  ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರವಾಗಿ ಗಾಯವಾದ ಘಟನೆ  ಪಟ್ಟಣ  ಸಮೀಪದ ಮರಳಿ ಗ್ರಾಮದಲ್ಲಿ ನಡೆದಿದೆ.
ಮನೆ ಮುಂದೆ ಕಸ ಬಳೆಯುವಾಗ ಏಕಾಏಕಿ ಮನೆಯ ಗೋಡೆ  ಕುಸಿದ ಪರಿಣಾಮ 40 ವರ್ಷದ
ಅಂಬಮ್ಮ ಗಂಡ ಲಕ್ಷ್ಮಣ್ಣ ಎಂಬ ಮಹಿಳೆಯ ಒಂದು ಕೈ  ಒಂದು ಕಾಲು ಮುರಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು  ಭೇಟಿ ನೀಡಿ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ಮರಳಿ ಗ್ರಾಮಸ್ಥರು ಒತ್ತಾಯ ಮಾಡಿದರು.
Share this Article
error: Content is protected !!