ಶಾಸಕರು ಅಭಿವೃದ್ಧಿ ಪಥದಲ್ಲಿದ್ದಾರೆ : ರಘುವೀರ್ ಚಲುವಾದಿ

Nagaraj M
1 Min Read
ನಾಗರಾಜ್ ಎಸ್ ಮಾಡಿವಾಳರ
ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿರವರು ಅಭಿವೃದ್ಧಿ ಪಥದಲ್ಲಿದ್ದಾರೆ ಎಂದು
ಭಾರತೀಯ ದಲಿತ ಫ್ಯಾಥರ ವಿಭಾಗಿಯ ಕಾರ್ಯಧ್ಯಕ್ಷ ರಘುವೀರ್ ಹೇಳಿದರು.
 ಶುಕ್ರವಾರ ಪತ್ರಿಕೆಯೊಂದಿಗೆ  ಮಾತನಾಡಿದ ಅವರು
ಪಟ್ಟಣದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಶಾಸಕರ ನೇತೃತ್ವದಲ್ಲಿ ನಡೆದಿವೆ ಅಧಿಕಾರಿಗಳ  ಸ್ಪಂದನೆ ಸಿಗದ ಕಾರಣ ಮುದಗಲ್ ಪಟ್ಟಣದ ಕುಡಿಯುವ ನೀರಿನ  ಸಮಸ್ಯೆಯಾಗಿದೆ ಶಾಸಕರು 24×7ಕುಡಿಯುವ ನೀರಿನ ಯೋಜನೆ ತಂದು ಕಾಮಗಾರಿಯು ಕೂಡ ಪ್ರಗತಿಯಲ್ಲಿದೆ
ಅಭಿವೃದ್ಧಿಕಾರ್ಯಗಳಿಗೆ ಸ್ಪಂದಿಸದ ಅಧಿಕಾರಿಗಳ  ವರ್ಗಾವಣೆ ಕೂಡ ಸರಕಾರದ ಮಟ್ಟದಲ್ಲಿ ಆಗುತ್ತಿಲ್ಲ ಶಾಸಕರು ಅನುದಾನ ನೀಡಿ  ಸೂಚನೆ ನೀಡಿದರು ಅಧಿಕಾರಿಗಳ ಬೇಜವಾಬ್ದಾರಿತನ ದಿಂದ ಇಂತಹ ಪರಿಸ್ಥಿತಿಗಳು ಉದ್ಭವವಾಗಿದೆ. ಕಳೆದ ನಾಲ್ಕು ವರ್ಷದ ಶಾಸಕರ ಆಡಳಿತದಲ್ಲಿ ಲಿಂಗಸಗೂರು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಮಾದರಿ ನಗರವಾಗಿಸುವ ಕನಸ್ಸು ಹೊಂದಿದ್ದಾರೆ ಅವರ ವಿರುದ್ಧ ಹೋರಾಟ ಮಾಡಿದರೆ ಮಾತ್ರ ಕೆಲಸ ಮಾಡುವ ಮನಸ್ಥಿತಿ ನಮ್ಮ ಶಾಸಕರಿಲ್ಲ ಶೀಘ್ರದಲ್ಲಿ ಕುಡಿಯುವ ನೀರು  ಹಾಗೂ ರಸ್ತೆ ಸಮಸ್ಯೆಗೆ ಶಾಸಕರು ನಾಂದಿ ಹಾಡಲಿದ್ದಾರೆ ಎಂದರು.
Share this Article
error: Content is protected !!