ಗೋ ಪೂಜೆ ಮೂಲಕ ಹರ್ಷ ಮುತಾಲಿಕರ  ಹುಟ್ಟುಹಬ್ಬ ಆಚರಣೆ.

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ್
ಮುದಗಲ್ :  ಪಟ್ಟಣದ ಗೋ ಶಾಲೆಯಲ್ಲಿ ಮುತಾಲಿಕ್ ರವರ ಹೆಸರಿನಲ್ಲಿ  ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ   ಡಾ. ಈಶ್ವರ ಸವಡಿ ಆಸ್ಪತ್ರೆಯಲ್ಲಿದ್ದ ಗರ್ಭಿಣಿ ಮಹಿಳೆಯರಿಗೆ ಹರ್ಷ ಮುತಾಲಿಕರಂತಹ ಸಮಾಜ ಸೇವಕ ಮಕ್ಕಳು ಹುಟ್ಟಲಿ ಎಂದು ಆಶಿಸಿ ಹಣ್ಣು ವಿತರಣೆ ಮಾಡಿ ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಹರ್ಷ ಮುತಾಲಿಕ್  ರವರ  ಹುಟ್ಟುಹಬ್ಬ ಆಚರಣೆ ಮಾಡಿದರು.
 ನಂತರ ಮಾತನಾಡಿದ ಪುರಸಭೆ ಸ್ಥಾಯಿ ಸಮಿತಿ ಮಾಜಿ  ಅಧ್ಯಕ್ಷ ಹೇಮಂತ್ ನಾಗಲಾಪುರ ಹಿಂದೂ ಪರ ಕಾಳಜಿಯುಳ್ಳ ಹರ್ಷ ಜಿ ಯುವಕರಿಗೆ  ಆದರ್ಶವಾಗಿದ್ದರೆ ದೇವರು ಅವರಿಗೆ ಸುಖ, ಸಂತೋಷ, ನೆಮ್ಮದಿ ನೀಡಿ ದೇಶ ಸೇವೆ ಮಾಡುವ ಅವಕಾಶ ಸದಾ ನೀಡಲಿ ಅವರ ಸಾಮಾಜಿಕ ಹೋರಾಟಗಳಲ್ಲಿ ಜಯವಾಗಲಿ ಎಂದು ಶುಭಕೋರಿದರು.ಈ ಸಂದರ್ಭ ಡಾ. ಈಶ್ವರ ಸವಡಿ, ಅನಂತ್ ದಾಸ್,ವಿಜಯ್ ಕುಮಾರ್, ಸಣ್ಣ ಸಿದ್ದಯ್ಯ ಸ್ವಾಮಿ, ಗಡ್ದೆಪ್ಪ ಅಡಪದ ,ವಿನೋದ್ ಗುಡಿಮನಿ  ಮಹಾಂತೇಶ್ ಅಕ್ಷತಿ, ವಿಜಯ್ ಪಾಟೀಲ್, ಲಿಂಗಪ್ಪ ಮಡಿವಾಳರ, ಪತ್ರಕರ್ತ  ನಾಗರಾಜ್ ಎಸ್ ಮಡಿವಾಳರ,ಷ್ಣಣ್ಮುಖ ಶಿಂದೆ,ಇನ್ನಿತರರು ಇದ್ದರು.

Share this Article
error: Content is protected !!