ಎರೆಡು ಬೈಕ್ ನಡುವೆ ಅಪಘಾತ : ಸ್ಥಳದಲ್ಲೇ ಓರ್ವನ ಸಾವು

Nagaraj M
1 Min Read

 

ವರದಿ : ನಾಗರಾಜ್ ಎಸ್ ಮಡಿವಾಳರ್

ಮುದಗಲ್ : ಪಟ್ಟಣದ ಹೊರಭಾಗದಿಂದ ಹಾದು ಹೋಗುವ ತಾವರಗೇರಾ ರಸ್ತೆ ಹತ್ತಿರ ಎರೆಡು ಬೈಕ್ ಡಿಕ್ಕಿ ಒಡೆದ ಪರಿಣಾಮ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೊಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ತಾವರಗೇರಾ ಕಡೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಮುದಗಲ್ ನಿಂದ ತಾವರಗೇರಾ ಕಡೆಗೆ ಚಲುಸುತ್ತಿದ್ದ ಬೈಕ್ ಗೆ ಡಿಕ್ಕಿಯಾದ ಪರಿಣಾಮ
ಅಜ್ಮಿರ್ ತಂದೆ ಮಹೇಬೂಬ(35) ಎಂಬುವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ದೇವಪ್ಪ ತಂದೆ ಶರಣಪ್ಪ ಎನ್ನುವವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾಸ್ಥಳಕ್ಕೆ ಮುದಗಲ್ ಠಾಣೆಯ ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Share this Article
error: Content is protected !!