ತಾವರಗೇರಾ : ಕಾರು ಡಿಕ್ಕಿ ಸ್ಥಳದಲ್ಲೇ ಓರ್ವನ ಸಾವು

Nagaraj M
1 Min Read

ವರದಿ : ಎನ್ ಶಾಮೀದ್ ತಾವರಗೇರಾ 

ತಾವರಗೇರಾ : ಸಮೀಪದ ಕಿಲ್ಲರಾಹಟ್ಟಿ ಗ್ರಾಮದ ಅಡ್ಡಹಳ್ಳದ ಹತ್ತಿರ ಲಿಂಗಸಗೂರು ಕಡೆಗೆ ತೆರಳುತ್ತಿದ್ದ ಕಾರು ಮುಂದೆ ಚಲುಸುತ್ತಿದ್ದ ಟ್ಯಾಕ್ಟರ್ ಗೆ ಡಿಕ್ಕಿಒಡೆದ ಪರಿಣಾಮ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ತಾವರಗೇರಾ ದಿಂದ ಲಿಂಗಸಗೂರು ಕಡೆಗೆ ಹೋಗುವ ಕಾರು ರಸ್ತೆಯಲ್ಲಿ ಮುಂದೆ ಚಲುಸುತ್ತಿದ್ದ ಟ್ಯಾಕ್ಟರ್ ಗೆ ಡಿಕ್ಕಿಯಾಗಿ ಪರಿಣಾಮ ಅಶೋಕ್ ಅಮರಪ್ಪ ಜಗತಾಪ್ ಗುರಗುಂಟ (48) ಎಂಬುವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಶರಣಬಸವ ಕುಪ್ಪಣ್ಣ ಭೋವಿ, ವಿವೇಕಾನಂದ ತೊಪಲಕಟ್ಟಿ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾಸ್ಥಳಕ್ಕೆ ತಾವರಗೇರಾ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Article
error: Content is protected !!