ಲಿಂಗಸಗೂರು : ವರದಕ್ಷಿಣೆ ಆಸೆಗೆ ಯುವತಿಯ ಕೊಲೆ…

Nagaraj M
1 Min Read

ನಾಗರಾಜ್ ಎಸ್ ಮಡಿವಾಳರ

ಲಿಂಗಸಗೂರು : ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ಬಳಿಕ ಗಂಡನ ಮನೆಯವರು ಚೈತ್ರಾ (19) ಎಂಬ ಯುವತಿಯನ್ನು ನೇಣುಹಾಕಿ ಕೊಂದಿರುವ ಆರೋಪ ಕೇಳಿಬಂದಿದೆ. ಈ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾಲಿಂಗಸುಗೂರು ಗ್ರಾಮದಲ್ಲಿ ನಡೆದಿದೆ.

ಕಳೆದ 7ತಿಂಗಳ ಹಿಂದೆ ತಾಲೂಕಿನ ಜುಲಗುಡ್ಡ ಗ್ರಾಮದ ನಿವಾಸಿಯಾದ ಬಸವರಾಜ್ ಎಂಬುವವರ ಮಗಳು ಮೃತ ದುರ್ದೈವಿ ಚೈತ್ರರನ್ನ ಕಸಬಾ ಲಿಂಗಸಗೂರಿನ ಕುಪ್ಪಣ್ಣ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ ಕುಪಣ್ಣ ಕುಟುಂಬಸ್ಥರ ಬೇಡಿಕೆಯಂತೆ ವರದಕ್ಷಿಣೆಯಾಗಿ 1.5 ತೊಲೆ ಬಂಗಾರವನ್ನು ಮತ್ತು ವಾಚು ಹಾಗೂ ಬಟ್ಟೆ ಗಳನ್ನು ಕೊಟ್ಟಿದ್ದು, ಮದುವೆ ನಂತರ ಗಂಡ ಹೆಂಡತಿ ಮೂರ್ನಾಲ್ಕು ತಿಂಗಳು ಚೆನ್ನಾಗಿದ್ದು ಕಳೆದ ಎರಡು ತಿಂಗಳುದಿಂದ ಕುಪ್ಪಣ್ಣ ಕಾರು ತೆಗೆದುಕೊಳ್ಳುವ ಸಲುವಾಗಿ ಮೂರು ಲಕ್ಷ ರೂಪಾಯಿಗಳನ್ನು ವರದಕ್ಷಿಗೆ ರೂಪವಾಗಿ ತವರು ಮನೆಯಿಂದ ತರಬೇಕೆಂದು ಯುವತಿಗೆ ಒತ್ತಾಯಿಸಿ ಶನಿವಾರ ಮಧ್ಯಾಹ್ನ ಚೈತ್ರಾಗೆ ಗಂಡನ ಮನೆಯವರು ಹೊಡೆದು, ಬಳಿಕ ನೇಣು ಹಾಕಿ ಕೊಲೆ ಮಾಡಿರುವ ಮಾಹಿತಿ ಆಧರಿಸಿ ಕೊಲೆಯಾದ ಚೈತ್ರಾಳ ತಂದೆ ಬಸವರಾಜ ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತಳ ಗಂಡ ಕುಪ್ಪಣ್ಣ ಹಾಗೂ ಕುಟುಂಬಸ್ಥರಾದ ಕುಪ್ಪಮ್ಮ, ನಾಗಪ್ಪ, ನಿರುಪಾದಿ, ಮಲ್ಲಪ್ಪ, ನಾಗಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Share this Article
error: Content is protected !!