ಹೆಸರಿಗಷ್ಟೇ ಮುದಗಲ್ ಶಾಸಕ ಪಟ್ಟಣದಲ್ಲಿ ಅಭಿವೃದ್ಧಿ ಮಾತ್ರ ಶೂನ್ಯ …

Nagaraj M
1 Min Read
 ವರದಿ :  ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ತಾಲೂಕಿನಲ್ಲಿ  ಮುದಗಲ್ ಶಾಸಕರೆಂದೆ  ಹೆಸರುವಾಸಿಯಾಗಿದ್ದಾರೆ  ಆದರೆ  ಮುದಗಲ್ ಪಟ್ಟಣದಲ್ಲೇ ಮೂಲಭೂತ ಸೌಕರ್ಯಗಳಿಲ್ಲದೆ  ಜನ ಪರದಾಡುವ ಸ್ಥಿತಿಯಲ್ಲಿದ್ದು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ಪಟ್ಟಣದ ನಿವಾಸಿಗಳ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣ ಪುರಸಭೆ ದರ್ಜೆಯಾದರು ಪಟ್ಟಣದಲ್ಲಿ  ಮೂಲಸೌಕರ್ಯ ಕೊರತೆ ಕಾಡುತ್ತಿದೆ
ಪಟ್ಟಣ 23 ವಾರ್ಡ್‌ 40ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು  ಏಳು ದಿನಕ್ಕೊಮ್ಮೆ ನೀರು, ಹಾಗೂ ಕೆಲ ವಾರ್ಡ್ ಗಳಲ್ಲಿ  ಚರಂಡಿ, ಬಿದಿದೀಪ ,ಕೆಲ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವೇ ಇಲ್ಲ, ಕೆಲ ವಾರ್ಡ್ ಗಳಲ್ಲಿ ರಸ್ತೆಗಳೇ ಇಲ್ಲ ಜನಸಂಖ್ಯೆ ಅನುಗುಣವಾಗಿ ಮೂಲಭೂತ ಸೌಕರ್ಯಗಳುನ್ನು ನೀಡುವಲ್ಲಿ ಶಾಸಕ ವಿಫಲರಾಗಿದ್ದಾರೆ.
ಅಭಿವೃದ್ಧಿ ಮತ್ತು ಹಣಕಾಸು ನಿಯಮಿತ ಸಂಸ್ಥೆ ಅನುದಾನದಲ್ಲಿ ಪಟ್ಟಣಕ್ಕೆ 24×7 ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿ 5 ವರ್ಷವಾದರೂ ಪೂರ್ಣಗೊಂಡಿಲ್ಲ, ಮುದಗಲ್ ಪಟ್ಟಣ ಹೆಸರಿಗಷ್ಟೇ ಪುರಸಭೆ ಯಾಗಿದ್ದು ಇಂತಹ ಹತ್ತು ಹಲವು ಸಮಸ್ಯೆಗಳನ್ನು ಜನ ಎದುರಿಸುತ್ತಿದ್ದಾರೆ ಕ್ಷೇತ್ರದ ಜನ ಪ್ರತಿನಿಧಿಗಳು ಗಮನಹರಿಸದೇ ಇರುವುದು ಮುಖ್ಯ ಕಾರಣವಾಗಿದೆ. ಜನರು ಮೂಲಭೂತ ಸೌಕರ್ಯಗಳ ಸಮಸ್ಯೆ ಹೆಚ್ಚಾಗಿ  ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಇನ್ನಾದರೂ ಶಾಸಕ ಸಮಸ್ಯೆಗಳಿಗೆ ನಾಂದಿ ಹಾಡಲಿದ್ದಾರಾ  ಎಂದು ಕಾದು ನೋಡಬೇಕಿದೆ.
Share this Article
error: Content is protected !!