ಕೌಟುಂಬಿಕ ಕಲಹ :  ಯುವಕ ಆತ್ಮಹತ್ಯೆ…

Nagaraj M
1 Min Read

ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದ ಪುರಸಭೆ ತ್ಯಾಜ್ಯ ನಿರ್ವಹಣಾ ಘಟಕದ ಮುಂಭಾಗದ ಮರಕ್ಕೆ
ಜಯ ಸಿಂಗ್ ತಂದೆ ರಾಮ್ ಸಿಂಗ್ ಎನ್ನುವ
ಯುವಕನೊಬ್ಬ  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉತ್ತರಪ್ರದೇಶ ಮೂಲದ ಕುಟುಂಬಯೊಂದು  ಸುಮಾರು ವರ್ಷಗಳ ಹಿಂದೆ ಮುದಗಲ್ ಪಟ್ಟಣಕ್ಕೆ ದುಡಿಯಲು ಬಂದಿದ್ದು ಮೃತ ಯುವಕ ಜಯರಾಮ್ ಸಿಂಗ್ ತನ್ನ  ಅಕ್ಕ ನನ್ನು ಮಾತನಾಡಿಸಲು ಮೂರು ದಿನಗಳ ಹಿಂದೆ ಉತ್ತರಪ್ರದೇಶದಿಂದ ಪಟ್ಟಣಕ್ಕೆ ಬಂದಿದ್ದ. ಅಕ್ಕನ ಮನೆಯಲ್ಲಿ  ಕೌಟುಂಬಿಕ ಕಲಹವಾಗಿದ್ದು ಮನ ನೊಂದ
ಯುವಕ ಮರಳಿ ತಮ್ಮ ಊರಿಗೆ ತೆರಳುತ್ತೇನೆ ಎಂದು ಮನೆ ಯಿಂದ ಹೊರ ಬಂದು ನೇಣಿಗೆ ಶರಣಾಗಿದ್ದಾನೆ. ಎಂದು ಮುದಗಲ್ ಪೊಲೀಸ್ ಠಾಣೆಯ ಪಿಎಸ್ಐ ಡಾಕೇಶ್ ಉಪ್ಪಾರ ತಿಳಿಸಿದ್ದಾರೆ.
Share this Article
error: Content is protected !!