ಮುದಗಲ್ : ನಿರಂತರ ಮಳೆಗೆ ಬೆಳೆ ನಾಶ ರೈತ ಆತ್ಮಹತ್ಯೆ

Nagaraj M
0 Min Read

ವರದಿ : ನಾಗರಾಜ್ ಎಸ್ ಮಡಿವಾಳರ್

ಮುದಗಲ್ : ರಾಜ್ಯದ ಹಲವು ಕಡೆ ನಿರಂತರ ಮಳೆಯಾಗುತ್ತಿದ್ದು, ಮುದಗಲ್ ಸಮೀಪದ ಬೋಗಾಪುರ ಗ್ರಾಮದ ರೈತ ಬೆಳೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೈಗೆ ಬರಬೇಕಿದ್ದ ತೊಗರಿ ಮತ್ತು ನೆಲ್ಲು ಬೆಳೆ ಭಾರೀ ಮಳೆಯಿಂದಾಗಿ ನಾಶವಾಗಿದ್ದಕ್ಕೆ ಬೇಸರಗೊಂಡು ವೀರನಗೌಡ ಶೇಖರಗೌಡ(50) ಎನ್ನುವ ರೈತ. ಭಾನುವಾರ ರಾತ್ರಿ 10 ಗಂಟೆಯ ಸುಮಾರಿಗೆ ಹೊಲದಲ್ಲಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಘಟನಾಸ್ಥಳಕ್ಕೆ ಮುದಗಲ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Article
error: Content is protected !!