ಲಿಂಗಸಗೂರು ಸಹಾಯಕ ಆಯುಕ್ತರಿಗೆ ವಿಷ ಕೇಳಿದ ಮಹಿಳೆ…

Nagaraj M
1 Min Read

ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಮೂಲಭೂತ ಸೌಕರ್ಯ ಒದಗಿಸಿ ಇಲ್ಲವೇ  ಸಾಯಲು ವಿಷ ಕೊಡಿ ಎಂದು ಸಹಾಯಕ ಆಯುಕ್ತರ ಎದುರು ಹುಲಿಗೇಮ್ಮ ಎನ್ನುವ ಮಹಿಳೆ  ವಿಷ ಕೊಡಿ ಎಂದ  ಘಟನೆ ನಾಗಲಾಪೂರು ಗ್ರಾಮದಲ್ಲಿ ನಡೆದಿದೆ.  ಜಿಲ್ಲಾಧಿಕಾರಿಗಳ  ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನ  ನಾಗಲಾಪೂರು ಗ್ರಾಮದಲ್ಲಿ ಶನಿವಾರ ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರ ವಿವಿಧ ಸಮಸ್ಯೆಗಳ  ಕುರಿತು ಚರ್ಚಿಸಿದರು  ಗ್ರಾಮಸ್ಥರು ಸಮಸ್ಯೆಗಳನ್ನ ಹೇಳಿಕೊಳ್ಳುತ್ತಾ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮಗೆ  ಮೂಲಭೂತ ಸೌಕರ್ಯ ಒದಗಿಸಲು  ಸಂಪೂರ್ಣ  ವಿಫಲವಾಗಿದ್ದು ಗ್ರಾಮದಲ್ಲಿ  ಜೀವನ ನಡೆಸಲು ತುಂಬಾ ಕಷ್ಟವಾಗಿದೆ ಹಾಗೂ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜನರ ಕೈಗಳಿಗೆ ತಟ್ಟುತ್ತವೆ ಸರಕಾರ   ನಿರಂತರ ಜ್ಯೋತಿ ಯೋಜನೆ ಎಂದು ಕರೆಯುತ್ತಾರೆ ಆದರೆ ನಮಗೆ ಅದು ನಮಗೆ ಅಂತರಜ್ಯೋತಿಯಾಗಿ ಪರಿವರ್ತನೆ ಗೊಂಡಿದೆ, ವಿದ್ಯುತ್ ಸಂಪರ್ಕ ಕಡಿತಗೊಂಡಾಗ  ಜೆಸ್ಕಾಂ ಅಧಿಕಾರಿಗಳನ್ನು
ಗ್ರಾಮಸ್ಥರು ಸಂಪರ್ಕ ಮಾಡಿದಾಗ ವಿದ್ಯುತ್ ಅಧಿಕಾರಿಗಳು  ಸರಿಯಾದ ಮಾಹಿತಿ ನೀಡುವದಿಲ್ಲ,  ರೈತರ  ಪಂಪಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ನೀಡುವದಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳ ವಿರುದ್ದ  ರೈತರು ಹಿಡಿ ಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ  ಸಹಾಯಕ ಆಯುಕ್ತ  ರಾಹುಲ್ ಸಂಕನೂರು, ತಹಸೀಲ್ದಾರ ಶಂಶಲಂ, ಗ್ರಾಮ ಪಂಚಾಯತ ಅಧ್ಯಕ್ಷೆ ರಿಂದಾಬಾಯಿ ಕೃಷ್ಣ ರಾಠೋಡ, ಕ್ಷೇತ್ರಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ, ಶಿಶು ಅಭಿವೃದ್ಧಿ ಅಧಿಕಾರಿ ಶರಣಮ್ಮ ಕಾರನೂರು,  ಪಿಎಸೈ ಡಾಕೇಶ ಉಪ್ಪಾರ,  ಅರಣ್ಯ ಇಲಾಖೆ ಅಧಿಕಾರಿ ಚನ್ನಬಸವರಾಜ,ಕೃಷಿ ಅಧಿಕಾರಿ ಆಕಾಶ ದಾನಿ, ತಾಲೂಕ ಪಂಚಾಯತ ಸಿಬ್ಬಂದಿ ಸೋಮನಗೌಡ ಪಾಟೀಲ್, ಆರೋಗ್ಯ ಇಲಾಖೆ ಅಧಿಕಾರಿ ರವಿರಾಜ್,  ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
Share this Article
error: Content is protected !!