ಮುದಗಲ್ : ರಸ್ತೆ ಅಪಘಾತ ಓರ್ವನ  ಸಾವು 

Nagaraj M
0 Min Read
ವರದಿ : ನಾಗರಾಜ್ ಎಸ್ ಮಡಿವಾಳರ್

ಮುದಗಲ್ : ಪಟ್ಟಣದ ಮಸ್ಕಿ ರಸ್ತೆಯಲ್ಲಿ  ಬೈಕ್ ಲಾರಿ ನಡುವೆ ಅಪಘಾತ  ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಒಬ್ಬರಿಗೆ ಗಂಭೀರ ಗಾಯಗಳಗಿರುವ  ಘಟನೆ ಶುಕ್ರವಾರ ನಡೆದಿದೆ. ಮೆದಿಕಿನಾಳ ನಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರನು ಮುದಗಲ್ ಕಡೆಯಿಂದ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ  ಮೆದಿಕಿನಾಳ ಗ್ರಾಮದ ದೇವರಾಜ್ ತಂದೆ ಕರಿಯಪ್ಪ (18) ಸ್ಥಳದಲ್ಲೇ  ಮೃತಪಟ್ಟಿದ್ದು, ಮೌಲಪ್ಪ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.  ಘಟನಾಸ್ಥಳಕ್ಕೆ ಮುದಗಲ್ ಠಾಣೆಯ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share this Article
error: Content is protected !!