ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನೆ ಕಾರ್ಯಕ್ರಮ

Nagaraj M
1 Min Read

 

ವರದಿ : ನಾಗರಾಜ್ ಎಸ್ ಮಡಿವಾಳರ್ 

ಮುದಗಲ್ : ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ಆಚರಣೆ ಮಾಡಿದರು.
ಕಳೆದ ಮೂರು ದಿನಗಳಿಂದ ಮಠದಲ್ಲಿ ಆರಾಧನಾ ಕಾರ್ಯಕ್ರಮಗಳು ನಡೆದಿದ್ದು


23 ರಂದು ಪೂರ್ವಾರಾಧನೆ, 24 ರಂದು ಮದ್ಯರಾಧನೆ, 25 ರಂದು ಉತ್ತರಾಧನಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಬುಧವಾರ ಬೆಳಿಗ್ಗೆ ಅಭಿಷೇಕ, ಅಷ್ಟೋತ್ತರ ಮಹಾಪೂಜೆ, ಮಹಾಮಂಗಳಾರತಿ, ಉತ್ಸವ ಪ್ರಸಾದ ವಿತರಣೆ, ಕಾರ್ಯಕ್ರಮಗಳು ಜರುಗಿದವು.
ಶ್ರೀ ಮಠದ ಅಧ್ಯಕ್ಷ ನಾರಾಯಣ ರಾವ್ ದೇಶಪಾಂಡೆ, ಡಾ. ಗುರುರಾಜ ದೇಶಪಾಂಡೆ, ನರಸಿಂಗರಾವ್ ದೇಶಪಾಂಡೆ, ಶ್ರೀನಿವಾಸ್ ರಾವ್ ದೇಶಪಾಂಡೆ,ಅನಂತರಾವ್ ದೇಶಪಾಂಡೆ, ವೆಂಕಟೇಶ್ ಕುಲಕರ್ಣಿ, ರಾಘವೇಂದ್ರ ದೇಶಪಾಂಡೆ, ಗುರುರಾಜ ದೇಶಪಾಂಡೆ,ಹಾಗೂ ಬ್ರಾಹ್ಮಣ ಸಮಾಜದ ಮಹಿಳಾ ಭಜನಾ ಮಂಡಳಿ ಹಾಗೂ ಪಟ್ಟಣದ ಇತರ ಸಮಾಜದ ಭಕ್ತರು ಇದ್ದರು.

Share this Article
error: Content is protected !!