ಹೆತ್ತತಾಯಿ ಸಾವಿನ ಮಧ್ಯೆಯೂ ಪರೀಕ್ಷೆ ಬರೆದ ಯುವತಿ..

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ 
ಲಿಂಗಸಗೂರು : ತಾಯಿಯ ಸಾವಿನ  ಮಧ್ಯೆಯೂ ಹೆತ್ತಮ್ಮನ ಆಸೆಯಂತೆ ಓರ್ವ ಯುವತಿ ಪದವಿ ಪರೀಕ್ಷೆಗೆ ಬರೆದ ಘಟನೆ ಸಮೀಪದ ಅಮೀನಗಡದಲ್ಲಿ ನಡೆದಿದೆ.
ಅಮೀನಗಡ ನಿವಾಸಿಗಳಾದ ಶಿವರಾಜ ಚನ್ನಮ್ಮ ದಂಪತಿಗಳ ಮಗಳಾದ ಬಸಲಿಂಗಮ್ಮ ಎನ್ನುವ ಯುವತಿ ತನ್ನ ತಾಯಿ ಚನ್ನಮ್ಮರ  ಸಾವಿನ ಮಧ್ಯೆಯೂ  ಅಮೀನಗಡದಿಂದ ಲಿಂಗಸುಗೂರಿಗೆ ಬಂದು ಬಿಎ ಪದವಿ ಮೂರನೇ ಸೆಮಿಸ್ಟರ್ ಪರೀಕ್ಷೆಯನ್ನು ಬರೆದು ತಾಯಿಯ ಅಸೆ ಈಡೇರುಸಿದ್ದಾಳೆ.
ಭಾನುವಾರ ಅಮವಾಸ್ಯೆ ಪ್ರಯುಕ್ತ ತಾಯಿ ಚನ್ನಮ್ಮ ಉಪವಾಸ ವೃತದ ಮಧ್ಯೆಯೂ ಹೊಲದ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಬಿಪಿ ಸಮಸ್ಯೆಯಿಂದ ಚನ್ನಮ್ಮ ಸಾವನ್ನಪ್ಪಿದ್ದಾರೆ.ಪರೀಕ್ಷೆಯ ಹಿಂದಿನ ದಿನವೇ ತಾಯಿ  ಸಾವನ್ನಪ್ಪಿದ್ದರು ಕೂಡ ಯಾವುದೇ ಕಾರಣಕ್ಕೂ ಓದು ನಿಲ್ಲಬಾರದು ಎಂದುವ ತಾಯಿಯ  ಮಾತಿನಂತೆ  ಯುವತಿ ಬಸಲಿಂಗಮ್ಮ  ತನ್ನ ಪರೀಕ್ಷೆ ಮುಗಿಸಿ ತಾಯಿಯ  ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.
Share this Article
error: Content is protected !!