ರಾಯಚೂರು :  ಆಗಸ್ಟ್ 7ರಿಂದ 16ರ ವರೆಗೆ ನೈಟ್ ಕರ್ಫ್ಯೂ 

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ರಾಯಚೂರು :ರಾಜ್ಯದಲ್ಲಿ  ಕರೋನ ಮೂರನೇ ಅಲೆ  ಹೆಚ್ಚುತಿದ್ದಂತೆ ಎಚ್ಚತ್ತ ರಾಯಚೂರು ಜಿಲ್ಲಾಧಿಕಾರಿಗಳು ಮುಂಜಾಗ್ರತಾ  ಕ್ರಮವಾಗಿ ಇದೆ 7ರಿಂದ ಆಗಸ್ಟ್ 16ರ ವರೆಗೆ ನೈಟ್ ಕರ್ಫ್ಯೂ ಇರಲಿದೆ ಎಂದು  ಆದೇಶ  ಹೊರಡಿಸಿದ್ದಾರೆ.ಜಿಲ್ಲೆಯಲ್ಲಿ ಇಂದಿನಿಂದ  ರಾತ್ರಿ 09.00 ಗಂಟೆಯಿಂದ ಬೆಳಿಗ್ಗೆ 05.00 ಗಂಟೆಯವರೆಗೆ ಅಗತ್ಯ ಸೇವೆ, ಚಟುವಟಿಕೆಗಳನ್ನು ಹೊರತುಪಡಿಸಿ ಜನ ಗುಂಪು ಸೇರುವುದನ್ನು,   ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕೋವಿಡ್
ಕರ್ಫ್ಯೂ ನಿಯಮ ಪಾಲನೆ ಮಾಡದಿದ್ದರೆ  ಕೋವಿಡ್ -19 ನಿರ್ವಹಣೆಯ ಲಾಕ್‌ಡೌನ್ ಕ್ರಮಗಳನ್ನು , ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು , ವಿಪತ್ತು ನಿರ್ವಹಣಾ ಅಧಿನಿಯಮ -2005 ರ ಸೆಕ್ಷನ್ 51 ರಿಂದ 60 ರ ಉಪಬಂಧಗಳು , ಅಲ್ಲದೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 186 ರ ಅಡಿಯಲ್ಲಿನ ಅವರ ವಿರುದ್ಧ ಕ್ರಮ ಜರುಗಿಸಬಹುದು.
Share this Article
error: Content is protected !!