ಸೈಕಲ್ ಸವಾರಿ ಚಿತ್ರದ ಪ್ರೊಮೋ ಬಿಡುಗಡೆ ಸೆಲ್ಫಿ ಗೆ ಮುಗಿಬಿದ್ದ ಅಭಿಮಾನಿಗಳು

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್ 
ಸಿಂದಗಿ : ಸೈಕಲ್ ಸವಾರಿ ಚಿತ್ರದ ಪ್ರೊಮೋ ಬಿಡುಗಡೆ ಸೆಲ್ಫಿ ಗೆ  ಅಭಿಮಾನಿಗಳು ಮುಗಿಬಿದ್ದರು
ವಿಜಯಪುರ  ಜಿಲ್ಲಾ ತಳವಾರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ಸೈಕಲ್ ಸವಾರಿ ಚಿತ್ರದ ಖಳ ನಾಯಕ ನಟ ಶಿವಾಜಿ ಮೆಟಗಾರ ಅವರ ಹುಟ್ಟು ಹಬ್ಬದ ಅಂಗವಾಗಿ ನಗರದ ಮಾಂಗಲ್ಯ ಭವನದಲ್ಲಿ ಸೈಕಲ್ ಸವಾರಿ ಚಿತ್ರದ ಪ್ರೊಮೋ ಬಿಡುಗಡೆ ಮಾಡಲಾಯಿತು. ನಂತರ ಶಿವಾಜಿ ಮೆಟಗಾರ ಅವರಿಗೆ ಸೈಕಲ್ ಸವಾರಿ ಚಿತ್ರ ತಂಡದಿಂದ ಹುಟ್ಟು ಹಬ್ಬದ ಶುಭ ಕೋರಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸೈಕಲ್ ಸವಾರಿ  ನಟ ನಿರ್ದೇಶಕ ದೇವು ಅಂಬಿಗ ಹಾಗೂ ನಟಿ ದೀಕ್ಷಾ ಭೀಸೆ ಹಾಗೂ ಖಳ ನಟ ಶಿವಾಜಿ ಮೆಟಗಾರ ಅವರ ಜೊತೆಗೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಳ್ಳು ಮುಗಿಬಿದ್ದಿದ್ದರು. ಚಿತ್ರ ತಂಡ ಅಭಿಮಾನಿಗಳನ್ನು ಸಮಾಧಾನ ಮಾಡಲು ಹರಸಾಹಸ ಪಡಬೇಕಾಯಿತು. ಚಿತ್ರ ಬಿಡುಗಡೆ ಮುನ್ನವೇ ಸೈಕಲ್ ಸವಾರಿ ಚಿತ್ರಕ್ಕೆ ಅಭಿಮಾನಿಗಳು ಈ ಮಟ್ಟಕ್ಕೆ ಪ್ರೀತಿ ತೋರಿಸಿದ್ದಕ್ಕೆ ಚಿತ್ರ ತಂಡ ಉದಯ ವಾಹಿನಿ  ಮುಖಾಂತರ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭ ನಾಯಕ ನಟರಾದ  ದೇವು ಅಂಬಿಗ ನಾಯಕಿಯಾದ  ದೀಕ್ಷಾ ಭೀಸೆ,  ವಿಲನ್ ಪಾತ್ರದಲ್ಲಿ ಅದ್ಭುತ ನಟಸಿದ ಶಿವಾಜಿ ಮೇಟೆಗಾರ, ಲೋಕೇಶ, ಆನಂದ ಕಾಂಬ್ಳೆ, ಅಶೋಕ ಭಜಂತ್ರಿ, ಕಲ್ಮೇಶ ಮತ್ತು ತಂಡ. ಕಲಾವಿದರಾದ ನಾಗರಾಜ ದೊಡಮನಿ,ರಾಮಚಂದ್ರ ಕಾಂಬ್ಳೆ, ಶೀವಲಿಲಾ, ನ್ಯಾಸಾ, ಕಾವ್ಯ,ರಂಜು, ಗೀತಾ, ಜಾನು, ಜಯಶ್ರೀ, ಮೋಹನ, ಪ್ರಭು,ಹಬೀಬ, ಹಾಸ್ಯಕಲಾವಿದ ದೇವುಕುಮಾರ ಸಾತಲಗಾಂವ್, ಸಚೀನ, ಮಾಂತು, ಶಿವಾನಂದ ಕಂಕಣವಾಡಿ, ಆರ್.ಜಿ ಮೇಡೆಗಾರ್  ಚಿತ್ರದಲ್ಲಿ ಅಭಿನಯಿಸಿದ ನಟರು ಹಾಗೂ   ಡಾ. ಪ್ರಭು ಗಂಜಿಹಾಳ, ಡಾ. ವಿರೇಶ ಹಂಡಗಿ ಉಪಸ್ಥಿತರಿದ್ದರು.
Share this Article
error: Content is protected !!