ಅನಾಥ ಶವ ಪತ್ತೆ…

Nagaraj M
0 Min Read
ವರದಿ : ನಾಗರಾಜ್ ಎಸ್ ಮಡಿವಾಳರ್ 
ಲಿಂಗಸಗೂರು : ನಾರಾಯಣಪುರ ಜಲಾಶಯದ ಹಿನ್ನಿರಿನಲ್ಲಿ  ಅನಾಥ ಶವ
ತೇಲಿ ಬಂದಿರುವ ಘಟನೆ ತಾಲೂಕಿನ ಕಮಲದಿನ್ನಿಯ ಗ್ರಾಮದ ಹತ್ತಿರದ ನಡೆದಿದೆ.
  ಗ್ರಾಮ ಹತ್ತಿರ ಹರಿದು ಹೋಗುವ ಹಿನ್ನಿರಿನ ದಂಡೆ  ಮೇಲೆ ಶವ ತೆಲುತ್ತಿದ್ದುದನ್ನು ಕಂಡು ಗ್ರಾಮಸ್ಥರು
ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ  ಪೋಲೀಸ್ ಸಿಬ್ಬಂದಿಗಳು ಗ್ರಾಮಸ್ಥರಾದ ಸಮಾಜ ಸೇವಕ ಅಮರೇಶ ಚಲವಾದಿ ಹಾಗೂ ಇನ್ನಿತರರು ಸಹಾಯದಿಂದ ಶೋಧ ನಡೆಸಿ ನದಿಗೆ ಹಾರಿ ಶವವನ್ನು ಹೊರತಂದರು.ನಂತರ  ನದಿಯ ದಂಡೆಯಲ್ಲಿ
ಪೊಲೀಸರ  ಸಮ್ಮುಖದಲ್ಲಿ  ಕಮಲದಿನ್ನಿ ಗ್ರಾಮಸ್ಥರಿಂದ ಶವ ಸಂಸ್ಕಾರ ಮಾಡಲಾಯಿತು.ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.
Share this Article
error: Content is protected !!