ಮುದಗಲ್ : ರಸ್ತೆ ಅಪಘಾತ ಓರ್ವನ ಸಾವು

Nagaraj M
1 Min Read

ಪ್ರೀತಿಯ ಓದುಗ  ದೊರೆಗಳೇ,
ಕರೋನ ನಿಯಂತ್ರಣ  ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಮುದಗಲ್ ದಿಂದ ತಾವರಗೇರಾ ರಸ್ತೆಯಯಲ್ಲಿ ಬರುವ ಟೂಲ್ ಗೆಟ್ ಗೆ ಬೈಕ್ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬೈಕ್ ಸವಾರ ವೇಗದಲ್ಲಿ ಬಂದು ರಸ್ತೆಯ ಮದ್ಯ ಸ್ಥಾಪನೆ ಮಾಡಿರುವ ಟೂಲ್ ಕಲೆಕ್ಷನ್  ರೂಮ್ ಗೆ ಡಿಕ್ಕಿ ಹೊಡೆದಿದ್ದಾರೆ. ಮಹಾದೇವಪ್ಪ ದುರಗಪ್ಪ (50)  ಮೃತ ದುರ್ದೈವಿ ಎನ್ನಲಾಗಿದೆ. ಮೃತ ವ್ಯಕ್ತಿಯು ತಾವರಗೇರಾ ಸಮೀಪದ ಎಗ್ಗುಪೂರ ಗ್ರಾಮದಲ್ಲಿದ್ದ  ಮಗಳನ್ನು ನೋಡಿ  ಮರಳಿ ಮಸ್ಕಿ ತಾಲೂಕಿನ  ಬೆಳಿಗಿನೂರು ಕಡೆಗೆ  ತೆರಳುವ ವೇಳೆ ಈ ದುರ್ಘಟನೆ ನಡೆದಿದೆ.  ಘಟನಾಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
Share this Article
error: Content is protected !!