ಧರ್ಮಸ್ಥಳ ಸಂಸ್ಥೆ ಜನರ ಮನಸಿನಲ್ಲಿ ಶಾಶ್ವತವಾಗಿ ಉಳಿಯಲಿದೆ : ಮಹೇಶ್

Nagaraj M
1 Min Read

 

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ : ನಾಗರಾಜ್ ಎಸ್ ಮಡಿವಾಳರ್ 

ಮುದಗಲ್ : 

ಧರ್ಮಸ್ಥಳ ಸಂಸ್ಥೆ ಜನರ ಮನಸಿನಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಮಹೇಶ್ ಹೇಳಿದರು.

ಪಟ್ಟಣದ ಸಮೀಪದ ಬಯ್ಯಾಪೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ನಿರ್ಗತಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದರು. ಕಾರ್ಯಕ್ರಮದ   ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸಮಾಜದಲ್ಲಿ ಏನಾದರೂ ಹೊಸತೊಂದು ಕೊಡುಗೆ ನೀಡಬೇಕೆನ್ನುವ ಹಂಬಲ, ಕೊರೋನಾ ವೈರಸ್ ಭೀತಿಯಲ್ಲಿದ್ದವರಿಗೆ ಸಾಮಾನ್ಯ ಜನರಿಗೆ ಎದುರಾಗುವ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಬಡ, ಸಾಮಾನ್ಯ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆ ಉಳಿದುಕೊಂಡಿದ್ದಾರೆ. ಕೊರೋನಾ ಕಾಲದಲ್ಲಿ ಅಪಾಯದಲ್ಲಿದ್ದ ನಿರ್ಗತಿಕರಿಗೆ ಈ ಆಹಾರ ಧಾನ್ಯ ದಾರಿ ದೀಪವಾಗಿರಲಿದೆ ನಾವೆಲ್ಲ ಸೇರಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಜನರ ನೆರವಿಗೆ ಮುಂದಾಗುವ ಅವಶ್ಯಕತೆ ಇದ್ದು ನಾವೆಲ್ಲ ಸೇರಿ ಸಂಸ್ಥೆಯೊಂದಿಗೆ ಸಹಕರಿಸೋಣ ಎಂದರು.ಈ ಸಂದರ್ಭದಲ್ಲಿ ಬಯ್ಯಾಪೂರು ಗ್ರಾಮದ ಮುಖಂಡರಾದ ಸಿದ್ದನಗೌಡ ,ಹನುಮನಗೌಡ ,ಚಂದ್ರು ಗ್ರಾಮ ಪಂಚಾಯತ ಸದಸ್ಯರು ಯೋಜನಾಧಿಕಾರಿ ಮಹೇಶ ಬಯ್ಯಾಪೂರು ಸೇವಾಪ್ರತಿನಿಧಿಗಳು,ಒಕ್ಕೂಟ ಅಧ್ಯಕ್ಷರು ಇದ್ದರು.

Share this Article
error: Content is protected !!