ಮುದಗಲ್ : ಭಾರತೀಯ ಜೈನ್ ಸಂಘಟನೆಯಿಂದ  ಆಮ್ಲಜನಕ ಯಂತ್ರ ವಿತರಣೆ

Nagaraj M
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭಾರತೀಯ ಜೈನ ಸಮುದಾಯದಿಂದ ಉಚಿತವಾಗಿ ಆಮ್ಲಜನಕ ಯಂತ್ರ ವಿತರಣೆ ಮಾಡಲಾಯಿತು.ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಂಜೀವ್ ಜಾಂಗಡ  ಪಟ್ಟಣದಲ್ಲಿ ದಿನೇ ದಿನೇ ಸೊಂಕೀತರ ಸಂಖ್ಯೆ ಹೆಚ್ಚುತಿದ್ದು ಪಟ್ಟಣದಲ್ಲಿ ಹೋಮ್ ಐಸೋಲೋಷನ್‌ನಲ್ಲಿ  ಇರುವವರಿಗೆ ಆಕ್ಸಿಜನ್ ಅವಶ್ಯಕತೆಯಿದ್ದರೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಆಕ್ಸಿಜನ್ ಯಂತ್ರವನ್ನು ನೀಡುವ ಉದ್ದೇಶದಿಂದ ಉಚಿತವಾಗಿ ಯಂತ್ರ ನೀಡಲಾಗಿದೆ.
 ಬಡವರು ಇದರ  ಸದುಪಯೋಗ ಪಡೆದುಕೊಳ್ಳಿ ಈ ಯಂತ್ರಕ್ಕೆ ಐದು ಸಾವಿರ ರೂಪಾಯಿ ಠೇವಣಿ ಇರಿಸಿಕೊಳ್ಳಲಾಗುತ್ತಿದ್ದು, ಒಂದು ದಿನಕ್ಕೆ 200 ರೂಪಾಯಿ ಬಾಡಿಗೆ, ಯಂತ್ರ ಮರಳಿಸಿದಾಗ 5,000 ರೂ. ಮುಂಗಡ ಠೇವಣಿ ಮರುಪಾವತಿ ಮಾಡಲಾಗುತ್ತಿದೆ ಎಂದರು.ಈ ಸಂದರ್ಭ  ಸ್ಥಳೀಯ ಠಾಣೆಯ ಪಿಎಸ್ಐ ಡಾಕೇಶ್ ಯು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ ವಿನೋದ್, ಭಾರತೀಯ ಜೈನ ಸಮುದಾಯದ

ಸುರೇಶ್ ಜೈನ, ಸಂಜೀವ ಜಾಂಗಡ , ಸುರೇಶ  ಜಾಂಗಡ, ಹಾಗೂ ಪುರಸಭೆ ನಾಮನಿರ್ದೇಶನ ಸದಸ್ಯ ಸಂತೋಷ, ಸುರಪುರ ಇತರರು ಇದ್ದರು.

Share this Article
error: Content is protected !!