3ನೇ ವಾರ್ಡಿನಲ್ಲಿ ಸಂಪೂರ್ಣವಾಗಿ ಸಾನಿಟೈಜರ್ ಮಾಡಿಸಿದ ಮಹಾನಗರ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್

Nagaraj M
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ : ಪಂಪನಗೌಡ.ಬಿ.ಬಳ್ಳಾರಿ

ಬಳ್ಳಾರಿ ಮೇ 19. ಬಳ್ಲಾರಿ ಮಹಾನಗರ ಪಾಲಿಕೆಗೆ ಕಾಂಗ್ರೆಸ್ ನಿಂದ 3 ನೇ ವಾರ್ಡಿಗೆ ಸ್ಪರ್ದಿಸಲು ಸಜ್ಜಾಗಿದ್ದ ಪ್ರಭಂಜನ್ ಅವರು ಕೊನೆಯ ಗಳಿಗೆಯಲ್ಲಿ ಟಿಕೆಟ್ ಸಿಗದೇ ಇರುವ ಹಿನ್ನಲೆ ಸ್ವಂತoತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಮತದಾರ ಬಾಂಧವರು ಇವರನ್ನು ಆಶೀರ್ವದಿಸಿದರು, ಭರ್ಜರಿ ಮತಗಳ ಅಂತರದಿoದ ಗೆದ್ದರು. ಗೆದ್ದಮೇಲೇ ಸುಮ್ಮನೇ ಕೂರದೇ ಕೊರೋನ ರೋಗ ದಿನ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆ 3ನೇ ವಾರ್ಡಿನಲ್ಲಿ ಅವರೇ ಮುಂದೆನಿoತು ಸಂಪೂರ್ಣವಾಗಿ ಸಾನಿಟಜರ್ ಮಾಡಿಸಿದ್ದಾರೆ. ಇವರ ಕಾಳಜಿ,ಕೆಲಸವನ್ನು ವಾರ್ಡಿನ ಜನರು ಮೆಚ್ಚಿಕೊಂಡು ಶ್ಲಾಗಿಸಿದ್ದಾರೆ.

 

Share this Article
error: Content is protected !!