ಮುದಗಲ್ : ಪಟ್ಟಣದಲ್ಲಿ ಇಂದು ಬೆಳಿಗ್ಗೆ 10ರ ನಂತರ ಲಾಕ್ ಡೌನ್…

Nagaraj M
1 Min Read
ಪ್ರೀತಿಯ ಓದುಗ  ದೊರೆಗಳೇ,
ಕರೋನ ನಿಯಂತ್ರಣ  ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ: ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಕರೋನ  ನಿಯಂತ್ರಿಸಲು ಈಗಾಗಲೇ ಸರಕಾರ ಹಲವು ರೀತಿಯಲ್ಲಿ ಟಫ್ ರೂಲ್ಸ್ ಗಳನ್ನು ಜಾರಿಗೆ ತಂದಿತ್ತು ರಾಜ್ಯದಲ್ಲಿ ಕರೋನ ನಿಯಂತ್ರಣಕ್ಕೆ ಬಾರದ ಕಾರಣ ಜನರು ಹೆಚ್ಚು ಸೇರಿವುದನ್ನು ತಡೆಯಲು ದಿನಸಿ ಅಂಗಡಿಗಳಿಗೆ ಬೆಳಿಗ್ಗೆ 6ರಿಂದ ಸಂಜೆ ಮದ್ಯಾಹ್ನ 12ರ ವರೆಗೆ  , ಹಣ್ಣು, ತರಕಾರಿ ಅಂಗಡಿಗಳಿಗೆ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಕಾಲಾವಕಾಶ ಹೆಚ್ಚಿಗೆ ಮಾಡಿ  ಆದೇಶ ಹೊರಸಿತ್ತು. ಆದರೆ  ಜಿಲ್ಲೆಯಲ್ಲಿ  ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿಲ್ಲ.
ಈ ಹಿನ್ನಲೆಯಲ್ಲಿ ಇಂದಿನಿಂದ ಅಂದರೆ ಗುರುವಾರದಿಂದ  ಜಿಲ್ಲಾಡಳಿತ  ಸಂಪೂರ್ಣ ಲಾಕ್ ಡೌನ್ ಮಾಡುವ ಸೂಚನೆ ನೀಡಿದೆ. ಜಿಲ್ಲಾಡಳಿತದ  ಆದೇಶದಂತೆ ಪಟ್ಟಣದಲ್ಲಿ ಬೆಳಿಗ್ಗೆ  6ರಿಂದ 10ರ ವರೆಗೆ ಮಾತ್ರ ಎಲ್ಲ ವ್ಯಾಪಾರ, ವಹಿವಾಟುಗಳಿಗೆ ಅವಕಾಶ ನೀಡಿದೆ. ಬೆಳಿಗ್ಗೆ  10 ರ ನಂತರ ಆಸ್ಪತ್ರೆಗಳು, ಔಷಧಿ, ಹಾಲಿನ ಡೈರಿ, ಪೆಟ್ರೋಲ್ ಬಂಕ್ ಹೊರತುಪಡಿಸಿ ಯಾವುದೇ  ವ್ಯಾಪಾರ, ಅನಗತ್ಯ ಸಂಚಾರಕ್ಕೆ  ಅವಕಾಶವಿರುವುದಿಲ್ಲ ಎಂದು ಜಿಲ್ಲಾಡಳಿತದ ತಿಳಿಸಿದೆ.
Share this Article
error: Content is protected !!