ಎಸಿಬಿ ಸಿಬ್ಬಂದಿ ದಾಳಿ : ಮುದಗಲ್  ಪುರಸಭೆ ಸಿಬ್ಬಂದಿ ಬಂಧನ

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್: ಪಟ್ಟಣದ ಪುರಸಭೆಯ ವಾಲ್ ಮ್ಯಾನ್ ಸಿಬ್ಬಂದಿ ವೆಂಕಟೇಶ ತಳವಾರ ಅವರು ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಪುರಸಭೆ ಸಿಬ್ಬಂದಿಗೆ ಮಂಜೂರಾದ ಗೃಹ ವಸತಿ ಯೋಜನೆಯ ಮನೆ ನಿರ್ಮಾಣದ ಹಣ ಬಿಡುಗಡೆ ಮಾಡಲು ಪೌರ ಕಾರ್ಮಿಕೆ ಬಸಮ್ಮ ಎಂಬವರಿಗೆ ರೂ.25 ಸಾವಿರ ಲಂಚ ಕೇಳಿದ್ದರು. ಬಸಮ್ಮ ಅವರ ಮಗ ರಮೇಶ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರಗೆ ಎಸಿಬಿ ಎಸ್.ಪಿ. ಗುರುನಾಥ ಮಟ್ಟೂರು ಅವರ ಮಾರ್ಗದರ್ಶನ ಮೇರೆಗೆ ಡಿ.ವೈ.ಎಸ್.ಪಿ ಶಿವಕುಮಾರ, ಪಿ.ಎಸ್.ಐ ಪ್ರದೀಪ ತಳ್ಳಿಕೇರಿ, ವೀರಣ್ಣ ಹಳ್ಳಿ, ಕಾನಸ್ಟೇಬಲ್ ವಿಕ್ರಮ ಸಿಂಹರೆಡ್ಡಿ, ರಾಜಪ್ಪ, ವಿನೋಧರಾಮ, ಮುರಳಿ, ಬಸವರಾಜೇಶ್ವರಿ, ನಾಗರಾಜ, ಬಸವರಾಜ ಅವರ ನೇತೃತ್ವದ ತಂಡ ದಾಳಿ ಮಾಡಿ ವೆಂಕಟೇಶ ಅವರನ್ನ ಬಂದಿಸಲಾಗಿದೆ ಎಂದು ಎಸಿಬಿ ಪೊಲೀಸರು ತಿಳಿಸಿದರು.
Share this Article
error: Content is protected !!