ವಿಕೇಂಡ್ ಲಾಕ್ ಡೌನ್ – ಕವಿತಾಳ ಸಂಪೂರ್ಣ ಸ್ತಬ್ಧ

Nagaraj M
1 Min Read


ಉದಯವಾಹಿನಿ :
ಕವಿತಾಳ :
ಕರೋನಾ ಎರಡನೇ ಅಲೆ ಅಬ್ಬರಕ್ಕೆ ಸರಕಾರ ವಿಕೇಂಡ್ ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ವ್ಯಾಪಾರಸ್ಥರು ಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳು ಬಂದ ಮಾಡಿ ಲಾಕ್ ಡೌನ್ ಆದೇಶವನ್ನು ಪಾಲಿಸಿದ್ದರಿಂದಾಗಿ ಪಟ್ಟಣವೂ ರವಿವಾರ ಸಂಪೂರ್ಣ ಸ್ಥಬ್ದಗೊಂಡು ಬಿಕೋ ಎನ್ನುತ್ತಿತ್ತು.

ಈ ವೇಳೆ ಪಿಎಸ್ಐ ವೆಂಕಟೇಶ್. ಎಂ ಅವರ ನೇತೃತ್ವದಲ್ಲಿ ಪೋಲಿಸ್ ತಂಡ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲದೇ ಮಾಸ್ಕ್ ಇಲ್ಲದೆ ಅನಗತ್ಯವಾಗಿ ತಿರುಗಾಡುತ್ತಿರುವರ ಮೇಲೆ ದಂಡ ವಸೂಲಿ ಮಾಡುವ ಮೂಲಕ ಅತ್ಯಂತ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದರು.

ಔಷಧಿ ಅಂಗಡಿಗಳು ಹಾಗೂ ಆಸ್ಪತ್ರೆಗಳು ಹೊರತು ಪಡಿಸಿ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು.

Share this Article
error: Content is protected !!