ಮುದಗಲ್ :  ಮದ್ಯಾಹ್ನ 2 ರಿಂದ ಕರೋನ ಲಾಕ್ ಡೌನ್…

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್  : ಕೋವಿಡ್ ವೈರಸ್ ಹಾವಳಿಯ ಹಿನ್ನಲೆಯಲ್ಲಿ  ಕರೋನ  ಲಾಕ್ ಡೌನ್ ಮಾಡಬಹುದು. ರಾಯಚೂರು  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ನಿನ್ನೆ
ನಡೆದ ಸಭೆಯಲ್ಲಿ ಕರೋನ ಸಮಿತಿ  ಜಿಲ್ಲೆಯಾದ್ಯಂತ  ಮದ್ಯಾಹ್ನ 2ರ ರಿಂದ  ಕರೋನ ಲಾಕ್  ಡೌನ್ ಮಾಡಲು ನಿರ್ಧರಿಸಿದೆ ಜಿಲ್ಲಾಧಿಕಾರಿಗಳ ಆದೇಶದಂತೆ
ಮುದಗಲ್  ಪಟ್ಟಣದಲ್ಲಿ ಮದ್ಯಾಹ್ನ ೨ ಗಂಟೆಯವರೆಗೂ ಮಾತ್ರ ವ್ಯಾಪಾರ ವಹಿವಾಟಿಗೆ  ಅವಕಾಶ ಕಲ್ಪಿಸಗುತ್ತದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಕಿರಾಣಿ, ಬಟ್ಟೆ, ಬೀದಿ ಬದಿ ವ್ಯಾಪಾರಸ್ಥರಿಗೆ ಪಟ್ಟಣದ ಪುರಸಭೆ  10.30ಕ್ಕೆ ಸಭೆ ಕರೆದು. ಜೊತೆಗೆ  ಪಟ್ಟಣದಲ್ಲಿ ಮದುವೆಗಳಿಗೆ  50 ಜನರಿಗೆ ಮಾತ್ರ ಅವಕಾಶ ಇರಲಿದೆ, ಎಲ್ಲಾ ಕಲ್ಯಾಣ ಮಂಟಪಗಳನ್ನು ಮುಚ್ಚಬೇಕು ,
 ಪಟ್ಟಣದಲ್ಲಿ   ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಅವಕಾಶ ನೀಡವುದಿಲ್ಲ  , ಸರಕಾರಿ ಕಚೇರಿಗಳು ಯಥಾರೀತಿ ಇರಲಿದೆ ಎಂದು  ಜಿಲ್ಲಾಧಿಕಾರಿಗಳ ಆದೇಶ ಇರುತ್ತದೆ ಆದರೆ ನಾಳೆಯಿಂದ ಮುದಗಲ್ ಪಟ್ಟಣದಲ್ಲಿ ಮದ್ಯಾಹ್ನ 2ರಿಂದ  ಕರೋನ ಲಾಕ್ ಡೌನ್ ಆಗಲಿದೆ.
Share this Article
error: Content is protected !!