ಮಗಳನ್ನೇ  ಕೊಡಲಿಯಿಂದ ಕೊಚ್ಚಿ ಕೊಂದ ತಂದೆ 

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್ 
ಲಿಂಗಸಗೂರು :  ತಾಲ್ಲೂಕಿನ ಯರಜಂತಿ ಗ್ರಾಮದಲ್ಲಿ  ಅಪ್ರಾಪ್ತ ವಯಸ್ಸಿನ ಮಗಳನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಮೋನಮ್ಮ (14) ಕೊಲೆಯಾದ ಮೃತ ದುರ್ದೈವಿಯಾಗಿದ್ದಾಳೆ ಆರೋಪಿಯಾದ ತಂದೆ  ತಿಮ್ಮಯ್ಯ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ರಾತ್ರಿ ವೇಳೆ ಮನೆಯಲ್ಲಿ ಕುರಿ ಕಟ್ಟಿ ಹಾಕುವ  ಸಲುವಾಗಿ ಮೃತ ಮೋನಮ್ಮ ಮತ್ತು ಸಹೋದರ ನೊಂದಿಗೆ ಜಗಳವಾಗಿತ್ತು ಆಗ ಮೃತಳ ತಾಯಿ ಮೋನಮ್ಮ ನಿಗೆ ಬುದ್ದಿ ಹೇಳಿದ್ದಳು ಈ ಕಾರಣಕ್ಕೆ ಮೋನಮ್ಮ ಸಿಟ್ಟಾಗಿ ಮನೆಯಿಂದ ಹೊರ ಹೋಗಿದ್ದಳು ರಾತ್ರಿ ಯಾಗುತ್ತಿದ್ದಂತೆ  ತಾಯಿ ಮಗಳನ್ನು ಹುಡುಕಿ, ಸಿಗದಿದ್ದಾಗ ರಾತ್ರಿ 8ರ ಸುಮಾರಿಗೆ  ವಿಷಯ ತಂದೆಗೆ ತಿಳಿಸಿದ್ದಾಳೆ. ಅಷ್ಟರಲ್ಲಿ ಮಗಳು ಮನೆಗೆ ಬಂದು ಮಲಗಿದ್ದಾಳೆ ಬೆಳಿಗ್ಗೆ   ಎದ್ದ ತಂದೆ ಮನೆ ಮುಂದೆ  ಪಾತ್ರೆ  ತೊಳೆಯುತ್ತ ಕುಳಿತ್ತಿದ್ದ ಮಗಳಿಗೆ ರಾತ್ರಿ ಎಲ್ಲಿ ಹೋಗಿದ್ದೆ ಎನ್ನುತ್ತಾ ಕುತ್ತಿಗೆಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಈ ಪ್ರಕರಣ ಹಟ್ಟಿ  ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.
Share this Article
error: Content is protected !!