ನಾಗರಹಾಳ : ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷ ಪದಗ್ರಹಣ ಕಾರ್ಯಕ್ರಮ 

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ
ಮುದಗಲ್ : ಸಮೀಪದ ನಾಗರಹಾಳ ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನ  ಶ್ರೀ ನಾಗಭೂಷಣ ಶಾಸ್ತ್ರೀಗಳು ಪೂಜೆ ಸಲ್ಲಿಸುವ  ಮೂಲಕ ಅಧ್ಯಕ್ಷರು  ಉಪಾಧ್ಯಕ್ಷರು ಅಧಿಕಾರ ಸ್ವೀಕಾರ ಮಾಡಿದರು.
ಇದೆ  ಸಂದರ್ಭ ಮಾತನಾಡಿದ ಪಂಚಾಯತ ಅಭಿವೃದ್ಧಿ ಅಧಿಕಾರಿ ಸೋಮನಗೌಡ ಪಾಟೀಲ್ ಲೆಕ್ಕಿಹಾಳ ಈಗ ನೂತನ ಗ್ರಾಮ ಪಂಚಾಯತ  ಸದಸ್ಯರು , ಅಧ್ಯಕ್ಷರೊಂದಿಗೆ
ನಾಗರಹಾಳ ಗ್ರಾಮ ಪಂಚಾಯತ ಪ್ರತಿಯೊಂದು ಗ್ರಾಮಗಳ ಚರಂಡಿ ನಿರ್ಮಾಣ ಸಿ ಸಿ ರಸ್ತೆ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಮ್ಮ ನಾಗರಹಾಳ ಗ್ರಾಮ ಪಂಚಾಯತ ಜಿಲ್ಲೆಯಲ್ಲಿ ಮಾದರಿ ಗ್ರಾಮ ಮಾಡಲು ಶ್ರಮಿಸೋಣ ಎಂದರು.ನಂತರ ಮಾತನಾಡಿದ ಗ್ರಾಮ ಪಂಚಾಯತ ಸದಸ್ಯ ಅಮರೇಶ್ ಕಡಿ ಈ ಬಾರಿಯ ಗ್ರಾಮಪಂಚಾಯತಿಯ ಚುನಾವಣೆ ಜನರು ಜಾಗೃತಿಯಿಂದ ಮತ ಚಲಾಯಿಸಿದ್ದಾರೆ ವಿದ್ಯಾವಂತ ಪ್ರಜೆಗಳನ್ನು ತಮ್ಮ ಸೇವೆಗಾಗಿ ಚುನಾಯಿಸಿದ್ದಾರೆ ಅದನ್ನು ನಾವು ಉಳಿಸಿಕೊಳ್ಳುತ್ತೇವೆ.ಗ್ರಾಮದಲ್ಲಿ ಬಸ್ ನಿಲ್ದಾಣವೇ ನಮ್ಮ ಪ್ರಥಮ ಆದ್ಯತೆ ನಂತರ ಗ್ರಾಮದ ಸರ್ವತೋಮುಖ  ಅವೃದ್ಧಿಗಾಗಿ ಶ್ರಮಿಸುತ್ತೇವೆ ಎಂದರು. ಈ  ಸಂದರ್ಭ ನೂತನ ಸದಸ್ಯ ಶಶಿಕಾಂತ ಗೋರೆಬಾಳ, ಮುಕ್ಕಪ್ಪ ಸಂದಿಮನಿ, ಶಾಂತಮ್ಮ ಶರಣಗೌಡ, ಭೀಮ್ಮವ್ವ  ಕನಕಪ್ಪ , ಗ್ರಾಮಸ್ಥರಾದ  ನಿವೃತ್ತ ಶಿಕ್ಷಕರಾದ  ಗಂಗಾಧರ, ವೆಂಕನಗೌಡ, ಅಮರಗುಂಡಪ್ಪ , ಹಾಗೂ  ನಿಂಗನಗೌಡ ಪಾಟೀಲ್, ಗೋಪಾಲ್  ಕೃಷ್ಣ ಗುತ್ತೇದಾರ , ಬಸನಗೌಡ ಮೇಟಿ , ಹಾಗೂ ಗ್ರಾಮ  ಪಂಚಾಯತ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.
Share this Article
error: Content is protected !!