ಸಾಲಭಾದೆಯಿಂದ ಮಾನಪ್ಪ ನಾಯಕ ಚಿಲ್ಕರಾಗಿ ನೇಣಿಗೆ ಶರಣು

Nagaraj M
1 Min Read

ಉದಯವಾಹಿನಿ

ಕವಿತಾಳ :-
ಎನ್ ಆರ್ ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಜಾರಿಗಾಗಿ ಪಾಮನಕಲ್ಲೂರ ಗ್ರಾಮ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ ಅನಿರ್ದಿಷ್ಟಾವಧಿ ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ರೈತ ಮಾನಪ್ಪ ನಾಯಕ (40) ಚಿಲ್ಕರಾಗಿ ಸಾಲಭಾದೆಯಿಂದ ಬುಧುವಾರ ನೇಣಿಗೆ ಶರಣಾಗಿದ್ದು ಪತ್ನಿ, ಮೂವರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಬಿಟ್ಟು ಅಗಲಿದ್ದಾರೆ.

ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವರಾಪ್ಪಗೌಡ ಹರ್ವಾಪುರ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ ಸೇರಿದಂತೆ ಹೋರಾಟ ಸಮಿತಿ ಪದಾಧಿಕಾರಿಗಳು ಮಾನಪ್ಪ ನಾಯಕನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಪಾಮನಕಲ್ಲೂರಿನ ಧರಣೆ ಸ್ಥಳದಲ್ಲಿ ರೈತರು ಶ್ರದ್ಧಾಂಜಲಿ ಸಲ್ಲಿಸಿ ಮಾನಪ್ಪ ನಾಯಕರ ಆಶಯಗಳನ್ನು ಈಡೇರಿಸೋಣ, 5ಎ ಕಾಲುವೆ ಜಾರಿಯಾಗುವ ವರೆಗೂ ಹೋರಾಡೋಣ, ಮಾನಪ್ಪ ನಾಯಕ ಅಮರ ರಹೇ ಅನ್ನುವಂತ ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

Share this Article
error: Content is protected !!