ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರ ಸಾವು 

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ಪಟ್ಟಣದ ಸಮೀಪದ ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಪಲ್ಲಿ ಹತ್ತಿರದ ರಸ್ತೆಯಲ್ಲಿ ಭೀಕರ ಅಪಘಾತ ನಡೆದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ದೇವದುರ್ಗ ತಾಲೂಕಿನ ಒಂದೇ ಕುಟುಂಬದ ಸದಸ್ಯರು ಲಿಂಗಸಗೂರು ಮಾರ್ಗವಾಗಿ ಕಾರಿನಲ್ಲಿ ತೆರಳುತ್ತಿದ್ದಾಗ. ಗೋಲಪಲ್ಲಿ ಬಳಿ ರಸ್ತೆ ಸುಧಾರಣೆ  ಕಾಮಗಾರಿ ನಡೆಯುತ್ತಿದ್ದ ಕಾರಣ ತಿಂಥಣಿ ಬ್ರಿಜ್ ಮಾರ್ಗವಾಗಿ  ಬಂದ ವಾಹನಗಳನ್ನು ನಿಲ್ಲಿಸಲಾಗಿತ್ತು . ಈ ವೇಳೆ, ಹಿಂದುಗಡೆಯಿಂದ ವೇಗವಾಗಿ ಬರುತ್ತಿದ್ದ ಸಿಮೆಂಟ್ ಟ್ಯಾಂಕರ್ ಲಾರಿ ಕಾಮಗಾರಿ ಸಲುವಾಗಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಒಂದು ಕಾರು ಪಲ್ಟಿಯಾಗಿದ್ದು.ಇನ್ನೊಂದು ಕಾರು ಜಖಂ ಗೊಂಡಿದೆ. ಇನ್ನು  ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ  ಹರ್ಷಿತಾ ಮತ್ತು ಭುವನ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.ಇದೆ ಕಾರಿನಲ್ಲಿದ್ದ ಇನ್ನು ಇಬ್ಬರು ಮೃತರ  ತಂದೆ-ತಾಯಿ ಎನ್ನಲಾಗಿದೆ. ತಂದೆ -ತಾಯಿ ಇಬ್ಬರು ಗಾಯಗೊಂಡಿದ್ದಾರೆ.ಘಟನಾ
ಸ್ಥಳಕ್ಕೆ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Share this Article
error: Content is protected !!