ಮಡಿವಾಳ ಮಾಚಿದೇವ ಜಯಂತಿಗೆ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ  ಗೈರು

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದ ಪುರಸಭೆಯಲ್ಲಿ ವೀರ ಗಣಾಚಾರಿ  ಮಡಿವಾಳ  ಮಾಚಿದೇವರ ಜಯಂತಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ  ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಲಿಂಗಪ್ಪ  ಗೈರು ಹಾಜರಾಗಿದ್ದು ಮಡಿವಾಳ ಸಮುದಾಯದ ಮುಖಂಡರು ಮುಖ್ಯಾಧಿಕಾರಿಗಳ ವಿರುದ್ಧ ಅಸಮಾಧಾನ  ವ್ಯಕ್ತ ಪಡಿಸಿದರು. ಹಾಗೂ  ಪಟ್ಟಣದ ಪೋಲಿಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ , ಸರಕಾರಿ  ಶಾಲೆಗಳಲ್ಲಿ, ಹಾಗೂ ವಿವಿಧ ಸಂಘ, ಸಂಸ್ಥೆಗಳಲ್ಲಿ ಶ್ರದ್ದಾ ಭಕ್ತಿಯಿಂದ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾಡಿದರು.ಈ ಸಂದರ್ಭ : ಪುರಸಭೆ ಉಪಾಧ್ಯಕ್ಷ ಶಿವಗ್ಯಾನಪ್ಪ ಬಡಕುರಿ,  ಮಡಿವಾಳ ಸಮಾಜದ ಮುಖಂಡರಾದ ಶರಣಪ್ಪ ಮಡಿವಾಳ, ಅಮರೇಶ್ ಮಡಿವಾಳ, ಬಸವರಾಜ್ ಮಡಿವಾಳ, ಹಾಗೂ ದುರಗಪ್ಪ ಕಟ್ಟಿಮನಿ, ಅಮೀರ್ ಬೇಗ್ ಉಸ್ತಾದ್ , ಕರಿಯಪ್ಪ ಯಾದವ್, ಮಹೇಬುಬ್ ಸಾಬ್ ಬಾರೀಗಿಡ,ನಾಮ ನಿರ್ದೇಶಕ ಸದಸ್ಯರಾದ ಉದಯ ಕುಮಾರ್, ಪಕೀರಪ್ಪ ,ಹಾಗೂ ಇನ್ನಿತರರು ಇದ್ದರು.
ಅನಾರೋಗ್ಯದ ಕಾರಣ  ಜಯಂತಿಯಲ್ಲಿ ಭಾಗವಹಿಸಿಸಲು ಆಗಲಿಲ್ಲ :
ನಾನು ಎಲ್ಲಾ ಜಯಂತಿಗಳಲ್ಲಿ ಭಾಗವಹಿಸಿದ್ದೇನೆ ನನ್ನ ಆರೋಗ್ಯ ಸ್ಥಿತಿ ಸರಿ ಇಲ್ಲ ಈ ಕಾರಣಕ್ಕಾಗಿ ಕಚೇರಿಗೆ ತಡವಾಗಿ ಬಂದೆ  ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಭಾಗವಹಿಸಲು ಆಗಲಿಲ್ಲ.
– ಮರಿಲಿಂಗಪ್ಪ ಮುಖ್ಯಧಿಕಾರಿಗಳು ಮುದಗಲ್ ಪುರಸಭೆ
Share this Article
error: Content is protected !!