ಮುದಗಲ್ : ಮದುಮಗಳು ಸೇರಿ ಇಬ್ಬರ ಸಾವು 

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ :  ಸಮೀಪದ  ಅಡವಿಭಾವಿ ಮೂಲದ ಮೂರು ವ್ಯಕ್ತಿಗಳು ಮಸ್ಕಿ ಪಟ್ಟಣದ ಬಸ್ ಡಿಪೋ ಹತ್ತಿರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮದುಮಗಳು ಸೇರಿದಂತೆ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೈಕ್ ಮೇಲೆ ಮೂವರು  ಅಡವಿಭಾವಿಯಿಂದ  ಮದುವೆಯ ಲಗ್ನ ಪತ್ರಿಕೆ ಹಂಚುವ  ನಿಮಿತ್ತ ಮಸ್ಕಿ ಭಾಗಕ್ಕೆ ತೆರಳಿದ್ದರು, ಲಗ್ನ ಪತ್ರಿಕೆ ಹಂಚಿ ಮರಳಿ ಬರುವ ಮುನ್ನ ಬೈಕ್ ಸವಾರನ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ. ರಾಜಬೇಗಂ, (23), ಮೌನಮ್ಮ , (22)ವೀರೇಶ್ (24), ಮೃತ ದುರ್ದೈವಿಗಳು ಎನ್ನಲಾಗಿದೆ. ಸ್ಥಳಕ್ಕೆ ಮಸ್ಕಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Share this Article
error: Content is protected !!