ಕವಿತಾಳ : ಸ್ವಾಮಿ ವಿವೇಕಾನಂದರ ಜಯಂತಿ

Nagaraj M
1 Min Read

 


ವರದಿ ಆನಂದ ಸಿಂಗ್ ರಜಪೂತ
ಉದಯ ವಾಹಿನಿ :

ಕವಿತಾಳ ಪಟ್ಟಣ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಯುವ ಬ್ರಿಗೇಡ್ ವತಿಯಿಂದ 158ನೇ ವೀರ ಸನ್ಯಾಸಿ ಮಹಾನ್ ದೇಶ ಪ್ರೇಮಿ ಯುವಕರ ಸ್ಪೂರ್ತಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು .

ಈ ಸಂದರ್ಭದಲ್ಲಿ . ಯುವ ಬ್ರಿಗೇಡ್ ಸಂಚಾಲಕರು ಹಾಗೂ ಪಟ್ಟಣದ ನೂರಾರು ಭಕ್ತರು ಪಾಲ್ಗೊಂಡಿದ್ದರು
ನಂತರ ಯುವ ಬ್ರಿಗೇಡ್ ಸಂಚಾಲಕರು ಅರುಣ ಕುಮಾರ್ ನಗನೂರ ಮಾತನಾಡಿ ಭಾರತೀಯ ಜನರಲ್ಲಿ ವಿಶೇಷವಾಗಿ ಯುವಕರಲ್ಲಿ ನವ ಚೈತನ್ಯ ತುಂಬಿದರು ದೀನ ದಲಿತರ ಪರವಾಗಿ ಮಾನವಿಯತೆ ಕಲ್ಯಾಣ ಪ್ರಗತಿ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಕೂಡುಗೆ ನೀಡಿದರು ಸರ್ವ ಜನರು ಸಮಾನರು ಭಾರತಾಂಬೆಯ ವೀರಪುತ್ರರು ದೇಶಭಕ್ತಿ ಜಾಗೃತಿ ಗೊಳಿಸಿದ ಭಾರತದ ಆಶಾಕಿರಣ ನಂದಾದೀಪ ಸ್ವಾಮಿ ವಿವೇಕಾನಂದರು ಎಂದು ಹೇಳಿದರು
ವಿಶೇಷವಾಗಿ ಇಂದು ಜನಿಸಿದ ಬಾಲಕ ವಿವೇಕ ದೇವರಾಜ ಅನ್ವರಿ ತನ್ನ ಜನ್ಮದಿನವನ್ನು ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಸರಳವಾಗಿ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ದೀಪಾ ಬೆಳಗಿಸುವುದರ ಮೂಲಕ ಆಚರಿಸಿದನು.
ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಸಂಚಾಲಕರು ಇದ್ದರು

Share this Article
error: Content is protected !!