ಗಂಗಾವತಿ ನಗರದಲ್ಲಿ ಸ್ಕೂಟರ್ ನಲ್ಲಿದ್ದ 3 ಲಕ್ಷ ರೂ ಕಳ್ಳತನ

N Shameed
1 Min Read
ಸಾಂದರ್ಭಿಕ ಚಿತ್ರಗಳು

ಎನ್ ಶಾಮೀದ್ ತಾವರಗೇರಾ

ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಸ್ಕೂಟರನಲ್ಲಿಟ್ಟಿದ್ದ ಮೂರು ಲಕ್ಷ ರೂ.ಗಳನ್ನು ಕಳ್ಳತನ ಮಾಡಿದ ಘಟನೆ ಜರುಗಿದೆ.
ನಗರದ ತಹಸೀಲ್ದಾರ್ ಕಚೇರಿ ಹತ್ತಿರ ನಗರದ ವೇಷಗಾರರ ಕಾಲೋನಿಯ‌ ನಿವಾಸಿ ಸುರೇಶ ಎನ್ನುವವರು ತಮ್ಮ ಭೂಮಿ ಖರೀದಿಯ ಸಬ್ ರೆಜಿಸ್ಟರಗೆ ತೆರಳಿದಾಗ ಕಚೇರಿ ಮುಂದುಗಡೆ ತಮ್ಮ ಸ್ಕೂಟರ್ ನಿಲ್ಲಿಸಿ ನೊಂದಣಿ ಕಚೇರಿಗೆ ತೆರಳಿದ್ದ ಸಂಧರ್ಬದಲ್ಲಿ ಸ್ಕೂಟರ್ ಬಾಕ್ಸ್ ನಲ್ಲಿ ಇಟ್ಟಿದ್ದ ಮೂರು ಲಕ್ಷ ರೂ.ಗಳನ್ನು ಕಳ್ಳತನ ಮಾಡಲಾಗಿದೆ.
ಹಣ ಕಳೆದುಕೊಂಡ ಸುರೇಶ್ ಅವರು ನಗರ ಠಾಣೆಗೆ ತೆರಳಿ ಹಣ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಹಣ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡುವಂತೆ ಪೊಲೀಸ್ ರು ಹೇಳಿದರು ಕೂಡ
ಸುರೇಶ್ ದೂರು ನೀಡಲು ಹಿಂದೇಟು ಹಾಕಿದ ಪ್ರಸಂಗ ನಡೆದಿದೆ.
ವೇಷಗಾರ ಸಮುದಾಯದಲ್ಲಿ ಯಾವುದೇ ಪ್ರಕರಣ ನಡೆದರೂ ಸಮಾಜದಲ್ಲಿ ನ್ಯಾಯ ಪಂಚಾಯಿತಿ ಸೇರಿ ವಿಚಾರಣೆ ನಡೆಸಿ ಇತ್ಯರ್ಥ ಮಾಡಿಕೊಳ್ಳಲಾಗುತ್ತದೆ. ಈಗ ಹಣ ಕಳ್ಳತನ ಪ್ರಕರಣವನ್ನು ಸಹ ಪೊಲೀಸರು ಸೂಕ್ತ ತನಿಖೆ ಹಣ ಪತ್ತೆ ಮಾಡುವಂತೆ ಬುಡ್ಗಜಂಗಮ‌ ಸಂಘದವರು‌ ಪೊಲೀಸ್ ಠಾಣೆಗೆ ತೆರಳಿ ಮನವಿ ಮಾಡಿದ್ದಾರೆ.

Share this Article
error: Content is protected !!