ತಾವರಗೇರಾ ಗ್ರಾಹಕ ಸೇವಾ ಕೇಂದ್ರದ “ಕಳ್ಳ”ರ ಬಂಧನ

N Shameed
1 Min Read

ಎನ್ ಶಾಮೀದ್ ತಾವರಗೇರಾ

ಕಳೆದ ತಿಂಗಳು ಕುಷ್ಟಗಿ ಬಟ್ಟೆ ಅಂಗಡಿ ಹಾಗೂ ತಾವರಗೇರಾ ಎಸ್ ಬಿಐ ಗ್ರಾಹಕರ ಸೇವಾ ಕೇಂದ್ರ ದಲ್ಲಿ ಕಳ್ಳತನ ಮಾಡಿದ್ದ ಆರೋಪಿತರನ್ನು ಬಂಧಿಸುವ ಲ್ಲಿ ಪೊಲೀಸ್ ರು ಯಶಸ್ವಿಯಾಗಿದ್ದಾರೆ.
ಕುಷ್ಟಗಿಯ ಗಜೇಂದ್ರಗಡ ರಸ್ತೆ ಯಲ್ಲಿರುವ ಆರ್ ಜೆ ಬಟ್ಟೆ ಅಂಗಡಿ ಯಲ್ಲಿ ರೆಡಿಮೇಡ ಬಟ್ಟೆಗಳು ಮತ್ತು ನಗದು ಹಣ ಕಳ್ಳತನ ಹಾಗೂ ತಾವರಗೇರಾ ಗ್ರಾಹಕರ ಸೇವಾ ಕೇಂದ್ರ ದಲ್ಲಿ ನಗದು ಹಣವನ್ನು ಕಳ್ಳತನ ಮಾಡಿದ್ದ, ಆರೋಪಿಗಳನ್ನು ಕುಷ್ಟಗಿ ಹಾಗೂ ತಾವರಗೇರಾ ಪೊಲೀಸ್ ರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗಂಗಾವತಿ ನಗರದ ನಿವಾಸಿಗಳಾಗಿದ್ದಾರೆ. ಬಂಧಿತರಿಂದ 1 ದ್ವಿಚಕ್ರ ವಾಹನ, ರೆಡಿಮೇಡ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣ ಕುರಿತು ತನಿಖೆ ಮುಂದುವರೆದಿದೆ.

Share this Article
error: Content is protected !!