ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:– ಬೊಲೆರೋ ಕಾರ್ ಪಲ್ಟಿಯಾಗಿ ಒಬ್ಬರು ಮೃತಪಟ್ಟು 7 ಜನರು ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಜರುಗಿದೆ.
ಮೃತನನ್ನು ಶಂಕರಲಿಂಗಪ್ಪ ನಾಗಲೀಕರ್ ಮುದುಗಲ್ 57 ವರ್ಷ ಎಂದು ಗುರುತಿಸಲಾಗಿದ್ದು ಮುದುಗಲ್ ನಿಂದ ಬಳ್ಳಾರಿ ಜಿಲ್ಲೆಯ ದೇವಸ್ಥಾನಕ್ಕೆ ಎಂದು ಕುಟುಂಬ ಸದಸ್ಯರು ತೆರಳಿದ್ದು ಅಲ್ಲಿಂದ ವಾಪಸ್ ಬರುವ ಸಂದರ್ಭದಲ್ಲಿ ಪಟ್ಟಣದ ಲಿಂಗಸೂರ್ ರಸ್ತೆಯ ನಿಂಗನಗೌಡ ಇವರ ಹೊಲದ ಹತ್ತಿರ ಕಾರಿನ ಟೈರ್ ಬ್ಲಾಸ್ಟ್ ಆಗಿ ಕಾರು ಪಾಲ್ಟಿಯಾಗಿದೆ ಕಾರಿನಲ್ಲಿದ್ದ ಇತರ ಏಳು ಜನರಿಗೆ ಗಾಯಗಳಾಗಿದ್ದು ಸ್ಥಳೀಯ ಹಾಗೂ ಬಾಗಲಕೋಟ ಆಸ್ಪತ್ರೆಗೆ ದಾಖಲಿಸಲಾಗಿದೆ ಸ್ಥಳಕ್ಕೆ ಪಿಎಸ್ಐ ನಾಗರಾಜ್ ಕೊಟಗಿ
ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Video Player
00:00
00:00