ತಾವರಗೇರಾ:- ಶಿಕ್ಷಕ ರಾಮಣ್ಣ ಮಾಗಿ ಇನ್ನಿಲ್ಲ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಸಮೀಪದ ಹಾಗಲದಾಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ರಾಮಣ್ಣ ಸೋಮನಗೌಡ ಮಾಗಿ (52) ಗುರುವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ, ಮೂವರು ಪುತ್ರಿಯರು, ಹಾಗು ಒಬ್ಬ ಪುತ್ರನನ್ನು ಅಗಲಿದ್ದು ತಾವರಗೇರಾ ದಲ್ಲಿಯೇ ವಾಸವಾಗಿದ್ದರು. ಮೂಲತಃ ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಹಂಚಿನಾಳ ಗ್ರಾಮದವರಾಗಿದ್ದು ಶುಕ್ರವಾರದಂದು ಸ್ವಗ್ರಾಮ ದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಅವರ ನಿಧನಕ್ಕೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ತಾಲೂಕಿ‌ನ ಶಿಕ್ಷಕ, ಶಿಕ್ಷಕಿಯರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

Share this Article
error: Content is protected !!