ಕೊಪ್ಪಳ:- ಖೇಲೋ ಇಂಡಿಯಾ ಗೆ ಆಯ್ಕೆಯಾದ ಹನುಮಸಾಗರ ಕ್ರೀಡಾ ಪಟುಗಳು..!

N Shameed
2 Min Read

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ:– ತಮಿಳುನಾಡಿನ ಕನ್ಯಾಕುಮಾರಿಯ ಸಿಎಸ್ಐ ಹಾಲ್ ನಲ್ಲಿ ಆಲ್ ಇಂಡಿಯಾ ಸಿಲಂಬಮ್ ಫೆಡರೇಷನ್ ವತಿಯಿಂದ 21ನೇ ರಾಷ್ಟ್ರ ಮಟ್ಟದ ಸಿಲಂಬಮ್(ದೊಣ್ಣೆ ವರಸೆ) ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. -13 ರಿಂದ 16 ಅಕ್ಟೋಬರ್ 2024 ರ ನಾಲ್ಕು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ದೇಶದ ನಾನಾ ರಾಜ್ಯಗಳಾದ ಜಮ್ಮು, ದೆಹಲಿ ,ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕೇರಳ ಪಾಂಡಿಚೇರಿ, ಮಹಾರಾಷ್ಟ್ರ ತಮಿಳುನಾಡು ,ಕರ್ನಾಟಕ
ಭಾಗವಹಿಸಿ ವಿನ್ನರ್ ಆಫ್ ಕಪ್ ತಮಿಳುನಾಡು, ರನ್ನರ್ ಆಫ್ ಕಪ್ ಮಹಾರಾಷ್ಟ್ರ, ಕರ್ನಾಟಕ 1ಚಿನ್ನ , 10 ಬೆಳ್ಳಿ,6, ಕಂಚಿನ ಪದಕಗಳನ್ನು ಪಡೆದು 92 ಅಂಕಗಳನ್ನು ಗಳಿಸುವ ಮುಖಾಂತರ ಸೆಕೆಂಡ್ ರನ್ನರ್ ಅಫ್ ಕಪ್ ನ್ನು ತನ್ನ ಮುಡಿಗೇರಿಸಿಕೊಂಡಿದೆ. ವಿದ್ಯಾರ್ಥಿಗಳು ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸಿಲಂಬಮ್ ಸಂಸ್ಥೆಯ ಸೆಕ್ರೆಟರಿ ಮಹಾಂತೇಶ್ ಬೀಳಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಟೀಮ್ ಮ್ಯಾನೇಜರ್ ಆಗಿ ಬಿಜಾಪುರದ ಸಾಹೇಬ್ ಗೌಡ ಬಿ, ಕೋಚ್ ಆಗಿ ಬೆಂಗಳೂರಿನ ಏ ಜಪಮಣಿ ಆಯ್ಕೆಯಾಗಿದ್ದರು. ಇಲ್ಲಿ ಪದಕ ಪಡೆದ ವಿದ್ಯಾರ್ಥಿಗಳು ಮುಂದೆ ನಡೆಯುವ ಖೇಲೋ ಇಂಡಿಯಾ, ಸ್ಕೂಲ್ ಗೇಮ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

 ಮಹಿಳೆಯರ ಸೀನಿಯರ್ ವಿಭಾಗದಲ್ಲಿ ಬೆಂಗಳೂರಿನ ಏ.ಏಂಜಲ್ ಸ್ಟಿಕ್ ಫೈಟ್ ನಲ್ಲಿ 1ಚಿನ್ನ, ಸ್ಪೇರ್ ಸ್ಟಿಕ್ ನಲ್ಲಿ 1 ಕಂಚು, ಅನುಷಾ ಎಮ್. 2ಬೆಳ್ಳಿ, ಪುರುಷರ ವಿಭಾಗದಲ್ಲಿ ಕೊಪ್ಪಳ ಜಿಲ್ಲೆಯ ವಿರಾಜ್ ಗುಡಿಕೋಟಿ 2 ಬೆಳ್ಳಿ, ಸಬ್ ಜೂನಿಯರ್ ವಿಭಾಗದಲ್ಲಿ ಪವನ್ ಗೌಡ ನಾಡಗೌಡರ್ 1ಬೆಳ್ಳಿ ,ಪ್ರೀತಮ್ ಬಿಂಗಿ ಸ್ಟಿಕ್ ಫೈಟ್ ನಲ್ಲಿ1ಬೆಳ್ಳಿ , ಸ್ಪೇರ್ ಸ್ಟಿಕ್ ರುಟೇಷನಲ್ಲಿ 1 ಕಂಚು, ದಿಗಂತ್ 1ಬೆಳ್ಳಿ, 1ಕಂಚು, ಬಿಜಾಪುರದ ಪ್ರಜ್ವಲ್ 1ಬೆಳ್ಳಿ ಮಿನಿ ಸಬ್ ಜೂನಿಯರ್ ವಿಭಾಗದಲ್ಲಿ ವಿಜಾಪುರ ಜಿಲ್ಲೆಯ ಚಿನ್ಮಯ್ ಬಿರಾದಾರ್ 1ಬೆಳ್ಳಿ, ಅಮಿತ್ ರಾಠೋಡ 2ಕಂಚು ಪದಕ ಪಡೆದುಕೊಂಡಿದ್ದಾರೆ.

ಹನುಮಸಾರ ಗ್ರಾಮಕ್ಕೆ ಆಗಮಿಸಿದ ಕ್ರೀಡಾಪಟುಗಳನ್ನು ಗುರು ಹಿರಿಯರು ಹಾಗೂ ಕ್ರೀಡಾ ಅಭಿಮಾನಿಗಳು ಪಟಾಕಿ ಹಚ್ಚಿ ಕೇಕ್ ಕಟ್ ಮಾಡುವ ಮುಖಾಂತರ ಸಂಭ್ರಮ ಆಚರಣೆ ಮಾಡಿದ್ದಾರೆ.

ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಹಳ್ಳೂರ್ ಸರ್ವ ಸದಸ್ಯರು ಹಾಗೂ ಕ್ರೀಡಾ ಅಭಿಮಾನಿಗಳು ಅಭಿನಂದಿಸಿದ್ದಾರೆ.

Share this Article
error: Content is protected !!