Saturday , October 12 2024
Breaking News
Home / Breaking News / ತಾವರಗೇರಿಯ ಕನ್ನಡ “ರತ್ನ ” ಪಿ ವಾಯ್ ದಂಡಿನ್ ಇನ್ನಿಲ್ಲ..!

ತಾವರಗೇರಿಯ ಕನ್ನಡ “ರತ್ನ ” ಪಿ ವಾಯ್ ದಂಡಿನ್ ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪಟ್ಟಣದ ಕನ್ನಡ ಉಪನ್ಯಾಸಕರು ಹಾಗೂ ಉತ್ತರ ಕರ್ನಾಟಕದಲ್ಲಿಯೇ ಸರಳ ಸಜ್ಜನಿಕೆಯ ಕನ್ನಡ ನಿಘಂಟುಕಾರರು ಹಾಗೂ ಹಾಸ್ಯ ಭರಿತ ಮಾತುಗಳಿಂದ ಮನೆ ಮಾತಾಗಿದ್ದ ಪಿವೈ ದಂಡಿನ್ ಸರ್ ಇನ್ನಿಲ್ಲ ಎಂಬುದೇ ದುಃಖದ ವಿಷಯ ಜೊತೆಗೆ ತಮ್ಮ ಸರಳತೆಯಿಂದಲೇ ಗುರಿತಿಸಿಕೊಂಡಿದ್ದ ಪರಮೇಶಪ್ಪ ಯಲ್ಲಪ್ಪ ದಂಡಿನ್ ಎಂಬ ಗುರುಗಳು ಅಪಾರ ಪ್ರಮಾಣದ ಶಿಷ್ಯರನ್ನು ಹೊಂದಿದ್ದು ವಿದೇಶದಲ್ಲಿಯೂ ಕೂಡ ವಿದ್ಯಾರ್ಥಿಗಳು ಇವರ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂಬುದು ಇತ್ತೀಚಿಗೆ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದ್ದರು.

ಅವರ ಜೀವನದ ಇನ್ನೊಂದು ವಿಶೇಷವೆಂದರೆ ತಾವು ಕೆಲಸ ಮಾಡುತ್ತಿದ್ದ ಶ್ರೀ ಶಶಿಧರ ಸ್ವಾಮಿ ವಿದ್ಯಾನಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ನಿವೃತ್ತಿಯಾಗುವವರೆಗೆ ಕೇವಲ ಒಂದೇ ರಜೆ ಮಾತ್ರ ಪಡೆದುಕೊಂಡಿದ್ದು, ವಿಶೇಷ ಆ ಒಂದು ದಿನ ಕೂಡ ತಮ್ಮ ತಂದೆಯವರು ತೀರಿಕೊಂಡಾಗ ರಜೆ ತೆಗೆದುಕೊಂಡಿದ್ದು,
ತಮ್ಮ ವೃತ್ತಿ ಜೀವನದಾದ್ಯಂತ ಕೇವಲ ಸೈಕಲ್ ಮೇಲೆ ಶಾಲೆಗೆ ತೆರಳಿ ಮನೆಗೆ ಆಗಮಿಸುತ್ತಿದ್ದರು. ಇಂತಹ ಸರಳ ಜೀವಿ ನಿಧನ ಹೊಂದಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೂ ಉತ್ತರ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ.

ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಪಟ್ಟಣದ ಎಲ್ಲಾ ಹಿರಿಯ ನಾಗರಿಕರು ಹಾಗೂ ಶಿಷ್ಯರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

About N Shameed

Check Also

ಮುದಗಲ್  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ    ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್  ಆಯ್ಕೆ 

ನಾಗರಾಜ ಎಸ್ ಮಡಿವಾಳರ  ಮುದಗಲ್ :  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ ಗುತ್ತೇದಾರ ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ …

One comment

  1. ನಾನು ನಿಮ್ಮ ವಿದ್ಯಾರ್ಥಿ ಗುರುಗಳೇ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ 💐💐💐🙏🙏

error: Content is protected !!