ಕಂದಾಯ ಇಲಾಖೆಯ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾವಳಿ

N Shameed
1 Min Read

ಶ್ರೀಕಾಂತ ಆರ್ ಜಿ ಲಿಂಗಸೂಗೂರ

ಲಿಂಗಸೂಗೂರು ಜು 28:- 2024 ನೇ ಸಾಲಿನ ವಾರ್ಷಿಕ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾವಳಿಯನ್ನು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಲಾಯಿತು.

ಲಿಂಗಸೂಗೂರ, ದೇವದುರ್ಗ, ಮಸ್ಕಿ, ಸಿಂಧನೂರು ತಾಲೂಕಿನ ಸಿಬ್ಬಂದಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಮೊದಲನೇ ಬಹುಮಾನವನ್ನು ಲಿಂಗಸೂಗೂರ ತಂಡ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ದೇವದುರ್ಗ ತಂಡ ಪಡೆದುಕೊಂಡಿದ್ದೆ,

ಪಂದ್ಯ ಸರಣಿ ಶ್ರೇಷ್ಠ ಸಹಾಯಕ ಆಯುಕ್ತರಾದ ಶಿಂದೆ ಅವಿನಾಶ ರವರಿಗೆ , ಉತ್ತಮ ಬೌಲರ್ ಕಿರಣ ಲಿಂಗಸೂಗೂರ ಉತ್ತಮ ಬ್ಯಾಟ್ಸ್ ಮ್ಯಾನ್ ರಾಗಿ ಮಕ್ತುಮ್ ದೇವದುರ್ಗ ಪಡೆದಿದ್ದಾರೆ.

ವಿಜೇತ ತಂಡಗಳಿಗೆ ಸಹಾಯಕ ಆಯುಕ್ತ ಶಿಂಧೆ ಅವಿನಾಶ, ಲಿಂಗಸೂಗೂರ ತಹಶೀಲ್ದಾರರಾದ ಶಂಶಾಲಂ ರವರು, ಮಸ್ಕಿ ತಹಶೀಲ್ದಾರ್ ಮಲ್ಲಪ್ಪ ಯಾರಿಗೋಳವರು ಬಹುಮಾನ ವಿತರಿಸಿದರು,
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳು ಇದ್ದರು.

Share this Article
error: Content is protected !!